More

    ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್​ಗೂ ಕರೊನಾ ಪಾಸಿಟಿವ್​!

    ಇತ್ತೀಚಿನ ದಿನಗಳಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ಮಂದಿ, ಕ್ರಿಕೆಟಿಗರು ಸೇರಿ ಯಾರನ್ನೂ ಈ ಮಹಾಮಾರಿ ಬಿಡುತ್ತಿಲ್ಲ. ಒಂದಲ್ಲ ಒಂದು ಮಾಯೆಯಿಂದ ಅಟಗಾಯಿಸಿಕೊಳ್ಳುತ್ತಿದೆ. ಇದೀಗ ದಕ್ಷಿಣದ ಲೇಡಿ ಸೂಪರ್​ಸ್ಟಾರ್ ನಯನತಾರಾ ಮತ್ತು ಅವರ ಬಾವಿ ಪತಿ ವಿಘ್ನೇಶ್​ ಶಿವನ್​ಗೂ ಕರೊನಾ ಪಾಸಿಟಿವ್​ ಇರುವುದು ಪತ್ತೆಯಾಗಿದೆಯಂತೆ! ಈ ಬಗ್ಗೆ ಕಾಲಿವುಡ್​ನಲ್ಲಿ ಸುದ್ದಿ ಹರಿದಾಡಿದ್ದೇ ತಡ, ಫ್ಯಾನ್ಸ್ ಶಾಕ್​ಗೆ ಒಳಗಾಗಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಸಾವಿಗೆ ಇಸ್ರೇಲ್​ನಲ್ಲೂ ಕಂಬನಿ!

    ಚೆನ್ನೈನಲ್ಲಿ ದಿನೇದಿನೆ ಕೋವಿಡ್​ 19 ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಸದ್ಯ ಚೆನ್ನೈನ ಮನೆಯಲ್ಲಿಯೇ ಈ ಜೋಡಿ ತಂಗಿದ್ದು, ಕರೊನಾ ಪಾಸಿಟಿವ್​ ಇದೆ ಎಂದು ವರದಿಯಾಗಿದೆ. ಈ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ನೆಚ್ಚಿನ ನಟಿ ಮತ್ತು ನಿರ್ದೇಶಕರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸಲ್ಮಾನ್​ ಖಾನ್!; ನೆಟ್ಟಿಗರಿಂದ ಮತ್ತೆ ತರಾಟೆ

    ಇತ್ತ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದಂತೆ, ನಯನತಾರಾ ಮತ್ತು ವಿಘ್ನೇಶ್​ ಆಪ್ತರಿಗೆ ಕರೆ ಮಾಡಿ ಕೇಳಿದಾಗ, ಅವರಿಂದ ಬಂದ ಉತ್ತರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ನಯನತಾರಾ ಮತ್ತು ವಿಘ್ನೇಶ್​ ಕ್ಷೇಮವಾಗಿದ್ದಾರೆ. ಅವರಿಗೆ ಆ ಥರದ ರೋಗಲಕ್ಷಣಗಳಾಗಲಿ ಯಾವುದೂ ಕಂಡು ಬಂದಿಲ್ಲ. ಈ ರೀತಿಯ ಗಾಳಿಸುದ್ದಿಯನ್ನು ನಂಬಬೇಡಿ’ ಎಂದಿದ್ದಾರೆ. ಆ ಮಾತು ಕೇಳಿದ ಬಳಿಕವಷ್ಟೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್​)

    VIDEOS | ಕಣ್ಣಾಲಿ ಒದ್ದೆಯಾಗುತ್ತದೆ.. ಸುಶಾಂತ್​ ಸಿಂಗ್​ ಸಾಕು ನಾಯಿ ಸ್ಥಿತಿ ನೋಡಿದರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts