

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೆ ಬಾಲಿವುಡ್ ಘಟಾನುಘಟಿಗಳಲ್ಲಿ ಒಂದಷ್ಟು ನಡುಕ ಉಂಟಾಗಿದೆ. ತನಿಖೆ ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ, ಸುಶಾಂತ್ ಅವರ ಹಳೇ ಪೋಸ್ಟ್ಗಳು, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಅದರಲ್ಲಿ ಈಗಾಗಲೇ ತಾಯಿಯನ್ನು ನೆನೆದು ಕೊನೆಯ ಇನ್ಸ್ಟಾಗ್ರಾನಲ್ಲಿ ಹಾಕಿದ್ದ ಪತ್ರ ಕಂಬನಿ ತರಿಸಿತ್ತು. ನಾಲ್ಕು ವರ್ಷದ ಹಿಂದಿನ ಪತ್ರವೊಂದು ತಾಯಿ ಬಗೆಗಿನ ಸುಶಾಂತ್ ಪ್ರೀತಿ ಎಂಥದ್ದು ಎಂದು ನೆನಪು ಮಾಡಿತ್ತು. ಇದೀಗ ಸುಶಾಂತ್ ಇಲ್ಲದೆ ಸಾಕುನಾಯಿ ಸ್ಥಿತಿ ಕಲ್ಲುಮನಸ್ಸಿನವರನ್ನೂ ಕರಗಿಸದೇ ಇರದು.
ಹೌದು, ಶ್ವಾನದ ಜತೆಗೆ ಅವಿನಾಭಾವ ನಂಟು ಹೊಂದಿದ್ದ ಸುಶಾಂತ್, ತಮ್ಮ ಸಿನಿಮಾದ ಶೂಟಿಂಗ್ ಎಲ್ಲೇ ನಡೆದರೂ, ಜತೆಯಲ್ಲಿಯೇ ಕರೆದೊಯ್ಯುತ್ತಿದ್ದರು. ಸೆಟ್ನಲ್ಲಿಯೇ ನಾಯಿ ಜತೆಗೆ ಸಾಕಷ್ಟು ವಿಡಿಯೋಗಳನ್ನು ಮಾಡಿ ಹಂಚಿಕೊಂಡಿದ್ದರು. ಸದ್ಯ ಆ ಎಲ್ಲ ವಿಡಿಯೋಗಳು ನೆಟ್ಟಿಗರ ಕಣ್ಣಾಲಿಗಳನ್ನು ತೇವ ಮಾಡುತ್ತಿದ್ದು, ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಅವರ ಫೋಟೋವನ್ನೇ ದಿಟ್ಟಿಸುತ್ತ ಮೌನಕ್ಕೆ ಜಾರಿದೆ. ಅಂಥ ಒಂದಷ್ಟು ವಿಡಿಯೋಗಳು ಇಲ್ಲಿವೆ. (ಏಜೆನ್ಸೀಸ್)