ಸುಶಾಂತ್​ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸಲ್ಮಾನ್​ ಖಾನ್!; ನೆಟ್ಟಿಗರಿಂದ ಮತ್ತೆ ತರಾಟೆ

Sushant-Singh-Rajput-5
Published on

ಕಳೆದೊಂದು ವಾರದಿಂದ ಸುಶಾಂತ್​ ಸಿಂಗ್​ ಆತ್ಮಹತ್ಯೆ ಬೆನ್ನಲ್ಲೆ ಒಂದಲ್ಲ ಒಂದು ಕಾರಣಕ್ಕೆ ಸಲ್ಮಾನ್​ ಖಾನ್​ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ನೆಪೋಟಿಸಂ ಎದುರಿಗಿಟ್ಟುಕೊಂಡು, ಬಾಲಿವುಡ್​ನ ಘಟಾನುಘಟಿಗಳನ್ನು ತರಾಟೆಗೆ ತೆಗೆದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅನ್​ಫಾಲೋ ಮಾಡುತ್ತಿದ್ದಾರೆ. ಅದೇ ರೀತಿ ಸಲ್ಮಾನ್​ ಖಾನ್​ಗೂ ಅಂಥದ್ದೇ ಬಿಸಿ ಮುಟ್ಟಿತ್ತು. ಆದರೆ, ಘಟನೆ ಬಗ್ಗೆ ಸಲ್ಮಾನ್ ತುಟಿ ಪಿಟಕ್​ ಅಂದಿರಲಿಲ್ಲ. ಇದೀಗ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ ನೆಟ್ಭಟಿಗರಿಂದ ರ್ಜರಿ ಟ್ರೋಲ್​ ಆಗಿ ಮುಖಭಂಗ ಅನುಭವಿಸಿದ್ದಾರೆ.

‘ನನ್ನೆಲ್ಲ ಅಭಿಮಾನಿಗಳಲ್ಲಿ ವಿನಂತಿ. ದಯವಿಟ್ಟು ಸುಶಾಂತ್​ ಸಿಂಗ್​ ಅಭಿಮಾನಿಗಳ ಜತೆ ಕೈ ಜೋಡಿಸಿ. ಅವರ ಭಾವನೆಗಳಿಗೆ ಸ್ಪಂದಿಸಿ. ಅವರ ಕುಟುಂಬಕ್ಕೆ ಬೆಂಬಲ ನೀಡಿ. ಪ್ರೀತಿಪಾತ್ರರ ಕಣ್ಮರೆ ನಿಜಕ್ಕೂ ನೋವುತರಿಸುವಂಥದ್ದು’ ಎಂದು ಟ್ವೀಟ್ ಮೂಲಕ ಫ್ಯಾನ್ಸ್​ಗೆ ಮನವಿ ಮಾಡಿದ್ದಾರೆ.

ಇನ್ನು ಈ ರೀತಿ ಟ್ವಿಟ್​ ಮಾಡಿದ್ದೇ ತಡ ಒಂದಷ್ಟು ನೆಟ್ಟಿಗರು ಸಲ್ಮಾನ್​ಗೆ ಸಂದೇಶಗಳ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ. ಆಫ್​ ಸ್ಕ್ರೀನ್​ನಲ್ಲಿ ನಟನೆ ಚೆನ್ನಾಗಿಯೇ ಮಾಡುತ್ತೀರಿ.. ನಾವು ಇನ್ನು ಮುಂದೆ ನಿಮ್ಮ ಸಿನಿಮಾಗಳನ್ನು ನೋಡುವುದಿಲ್ಲ. ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ. ಇದೀಗ ಆ ಯೋಗ್ಯತೆ ನಿನಗಿಲ್ಲ..

ಸುಶಾಂತ್​ ಆತ್ಮಹತ್ಯೆ ಬೆನ್ನಲ್ಲೆ ಜಸ್ಟಿಸ್​ ಫಾರ್ ಸುಶಾಂತ್​ಸಿಂಗ್​, ಬೈಕಾಟ್​ ಸಲ್ಮಾನ್​ ಖಾನ್​, ಬೈಕಾಟ್​ ಸ್ಟಾರ್ ಕಿಡ್ಸ್, ಬೈಕಾಟ್​ ಬಾಲಿವುಡ್​ ಎಂದೆಲ್ಲ ಹ್ಯಾಷ್​ಟ್ಯಾಗ್​ ಬಳಸಿ ಟ್ವಟಿರ್​ನಲ್ಲಿ ಟ್ರೆಂಡ್​ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ, ವಿ ಸ್ಟ್ಯಾಂಡ್​ ವಿತ್​ ಸಲ್ಮಾನ್​ ಖಾನ್​ ಹ್ಯಾಷ್​ಟ್ಯಾಗ್​ನಲ್ಲಿ ಸಲ್ಲು ಪರವಾಗಿ ಅವರ ಅಭಿಮಾನಿಗಳು ಕೋರಿದ್ದರು.

ಇನ್ನು ಒಂದೇ ಒಂದು ಸಾವು ಇಡೀ ಬಾಲಿವುಡ್​ ಅನ್ನೇ ನಡುಗಿಸುತ್ತಿದೆ. ಸ್ಟಾರ್​ ಕಲಾವಿದರ, ನಿರ್ದೇಶಕ, ನಿರ್ಮಾಪಕರ ಅಸಲಿ ಮುಖ ಹೊರಬೀಳುತ್ತಿದೆ. ನೆಟ್ಟಿಗರು ಜಾಲತಾಣದಲ್ಲಿ ಸ್ಟಾರ್​ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್​ ಖಾನ್​ ಕುಟುಂಬ ನನ್ನನ್ನು ಹಾಳು ಮಾಡಿತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ನಿರ್ದೇಶಕ ಅಭಿನವ್​ ಕಶ್ಯಪ್​, ಸಲ್ಮಾನ್​ ಖಾನ್​ ಒಡೆತನದ ಬೀಯಿಂಗ್​ ಹ್ಯೂಮನ್​ ಸಂಸ್ಥೆಯ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net