ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಹಾರ್ಟ್ಥ್ರೋಬ್ ನಟ ವಿಜಯ್ ದೇವರಕೊಂಡ ಪ್ರಸ್ತುತ ಸಿನಿಮಾಗಳ ಕೆಲಸಗಳಿಂದ ವಿರಾಮ ಪಡೆದಿದ್ದಾರೆ. ಇನ್ನು, ಮೂಲಗಳ ಪ್ರಕಾರ, ಸದ್ಯ ಇವರಿಬ್ಬರು ಗೋವಾ ವಿಹಾರದಲ್ಲಿದ್ದು, ಹೊಸ ವರ್ಷವನ್ನು ಒಟ್ಟಿಗೆ ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿವೆ. ಜೊತೆಗೆ, ನಟಿ ಮತ್ತು ನಟ ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿಲ್ಲ.