ನವೆಂಬರ್ 26 ರಿಂದ ಇಂದಿಗೂ 'RRR' ಚಿತ್ರದ ಪ್ರಚಾರ ನಡೆಯುತ್ತಲೇ ಇದೆ. ಬಹುತೇಕ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರೇಸ್ ಮೀಟ್ಗಳು ನಡೆಯುವುದರ ಜೊತೆಗೆ ಬೇರೆ-ಬೇರೆ ರೀತಿಗಳಲ್ಲಿ ಪ್ರಚಾರಗಳು ನಡೆಯುತ್ತಿವೆ. ಇಡೀ ಚಿತ್ರತಂಡ ಬೆಂಗಳೂರು, ಚೆನೈ, ತಿರುವನಂತಪುರಂ, ಮುಂಬೈ, ಹೈದರಾಬಾದ್ ಅಂತ ಬಹಳಷ್ಟು ಕಡೆ ಹೋಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಮುಂಬೈ, ಬೆಂಗಳೂರು, ಹೈದರಾಬಾದ್ನಲ್ಲಿ ದೊಡ್ಡ ಪ್ರೀ-ರಿಲೀಸ್ ಇವೆಂಟ್ಗೆ ಚಿತ್ರತಂಡ ತಯಾರಿಗಳನ್ನು ಮಾಡಿಕೊಳ್ಳಲು ಆರಂಭಿಸಿದೆ . ಅಂದಹಾಗೆ, ಸಿನಿಮಾದ ಪ್ರಚಾರಕ್ಕೆ ಒಟ್ಟು ಇಲ್ಲಿಯವರೆಗೆ 20 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದುಡ್ಡಿನಲ್ಲಿ ಹೊಸ ಸಿನಿಮಾನೇ ತೆಗೆಯಬಹುದಿತ್ತು. ಸದ್ಯ, ಚಿತ್ರದ ಪ್ರಚಾರಕ್ಕೆ ಬರೋಬ್ಬರಿ 20 ಕೋಟಿ ಖರ್ಚು ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.