ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ನಟಿಗೆ ಬಿಗ್​ ಶಾಕ್​: ಇದು ನಿಜ ಪ್ರೀತಿಗೆ ಸಿಕ್ಕ ಗೆಲುವೆಂದ ನಟ

Mirna Menon
Published on

ಚೆನ್ನೈ: ತಮಿಳು ನಟ ವಿಜಯ್​ ವಿಶ್ವ ಅಲಿಯಾಸ್​ ಅಭಿ ಶರವಣನ್​ ವಿರುದ್ಧ ಪತ್ನಿ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ತೀರ್ಪು ನೀಡಿರುವ ಚೆನ್ನೈ ನ್ಯಾಯಾಲಯ ನಟ ವಿಜಯ್​ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿದೆ.

ಅಭಿ ಸರವಣನ್​ ಮತ್ತು ಆದಿತಿ ಮೆನನ್​ ಅಲಿಯಾನ್​ ಮಿರ್ನಾ ಮೆನನ್​ 2016ರಲ್ಲಿ ತೆರೆಕಂಡ ಪಟ್ಟದಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ಚಿತ್ರದಲ್ಲಿ ಇಬ್ಬರ ನಡುವೆ ನಿಜವಾಗಿ ಪ್ರೇಮಾಂಕುರವಾಗಿತ್ತು. ಅಲ್ಲದೆ, ಇಬ್ಬರು ಮದುವೆ ಕೂಡ ಆಗಿದ್ದರು ಎಂದು ಹೇಳಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಆದಿತಿ ಮೆನನ್​ ಅಭಿ ಸರವಣನ್​ ವಿರುದ್ಧ ದೂರು ದಾಖಲಿಸಿ, ಮೂರು ವರ್ಷಗಳ ಲಿವಿಂಗ್​ ರಿಲೇಶನ್​ಶಿಪ್​ ಬಳಿಕ ನಾವಿಬ್ಬರು ಮದುವೆ ಆಗಿರಲಿಲ್ಲ. ಅಲ್ಲದೆ, ಅಭಿಗೆ ಅನೇಕ ಮಹಿಳೆಯರ ಜತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಳು.

ಈ ಪ್ರಕರಣ ಸುಮಾರು ಮೂರು ವರ್ಷದಿಂದ ಕೋರ್ಟ್​ನಲ್ಲಿತ್ತು. ಇದೀಗ ತೀರ್ಪು ನೀಡಿರುವ ಕೋರ್ಟ್​, ಅಭಿ ಸರವಣನ್​ ಮೇಲಿರುವ ಪ್ರಕರಣವನ್ನು ವಜಾಗೊಳಿಸಿ, ಆರೋಪದಿಂದ ಮುಕ್ತಗೊಳಿಸಿದೆ. ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.

ತೀರ್ಪಿನ ಬಗ್ಗೆ ಮಾತನಾಡಿರುವ ಅಭಿ ಸರವಣನ್​, ಉತ್ತಮವಾದ ತೀರ್ಪನ್ನು ಪಡೆದುಕೊಂಡಿದ್ದೇನೆ. ನನ್ನ ಪತ್ನಿ ಆದಿತಿ ಮೆನನ್ ನನ್ನ ಜತೆ ವಾಸಿಸುವಂತೆ ನ್ಯಾಯಾಲಯ ಹೇಳಿದೆ. ಆದರೆ, ನನ್ನೊಂದಿಗೆ ಇರಬೇಕು ಅಂತಾ ನಾನೆಂದು ಆಕೆಯನ್ನು ಬಲವಂತ ಮಾಡುವುದಿಲ್ಲ. ಏಕೆಂದರೆ, ನನ್ನದು ನಿಜವಾದ ಪ್ರೀತಿ. ಒಂದು ವೇಳೆ ಆಕೆ ಮರಳಿ ಬಂದರೆ ನನ್ನಷ್ಟು ಖಷಿಪಡುವ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net