More

    ಯಾರಿಗೂ ಉಪಕಾರ ಮಾಡಬೇಕಿಲ್ಲ ಎಂದು 5 ವರ್ಷದ ಸಿನಿ ಜರ್ನಿಯಲ್ಲಿ ಕಲಿತೆ: ರಶ್ಮಿಕಾ ಮಂದಣ್ಣ

    ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು 2016 ರಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ‘ ಮೂಲಕ ಪಾದಾರ್ಪಣೆ ಮಾಡಿದಾಗಿನಿಂದ ಸಿನಿರಂಗದಲ್ಲಿ ಒಂದೊಳ್ಳೆ ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ. ಇತ್ತೀಚೆಗೆ, ನಟಿ ತಮ್ಮ ಈ ಐದು ವರ್ಷಗಳ ಸಿನಿ ಪ್ರಯಾಣದ ಬಗ್ಗೆ ಇನ್​ಸ್ಟಾಗ್ರಾಂ ನಲ್ಲಿ ಸಣ್ಣದೊಂದು ಟಿಪ್ಪಣಿ ಬರೆದು ಹಂಚಿಕೊಂಡಿದ್ದಾರೆ. ಇದೀಗ, ನಟಿಯ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, 5 ವರ್ಷಗಳ ಪ್ರಯಾಣದಲ್ಲಿ ತಾವು ಕಲಿತ 9 ಬದುಕಿನ ಪಾಠಗಳ ಬಗ್ಗೆ ಬರೆದುಕೊಂಡು, ಆ ಪೋಸ್ಟ್​​ನಲ್ಲಿ ಎಲ್ಲರಿಗೂ ಹಲವು ವಿಚಾರಗಳನ್ನು ತಿಳಿಸಿದ್ದಾರೆ ರಶ್ಮಿಕಾ. ಹಾಗಿದ್ದರೆ, ರಶ್ಮಿಕಾ ಮಂದಣ್ಣ ಅವರು ಕಲಿತ ಆ 9 ಪಾಠಗಳು ಏನು ಅಂತೀರಾ…?
    1. ಸಮಯ ತುಂಬಾ ವೇಗವಾಗಿ ಸಾಗುತ್ತಿದೆ. ಹಾಗಾಗಿ, ಪ್ರತಿದಿನ ಸಂತೋಷದಿಂದ ಇರುವುದು ಕಲಿಯಿರಿ. ಒಂದಿಷ್ಟು ನೆನಪುಗಳನ್ನು ಮಾಡಿಕೊಳ್ಳಿ.
    2. ಹೃದಯದಿಂದ ಖುಷಿಯಾಗಿರುವುದು ಕಲಿತು, ಜೊತೆಗೆ ತುಂಬಾನೆ ಖುಷಿಯಾಗಿದ್ದೇನೆ.
    3. ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ, ನಿಮಗೆ ಬೇಕು ಎಂಬುದಕ್ಕೆ ನೀವು ಹೋರಾಡಿ, ಗೆದ್ದು, ಪಡೆದುಕೊಳ್ಳಬೇಕು.
    4. ತಾಳ್ಮೆ ಮತ್ತು ಶಾಂತಿಯಿಂದ ಇದ್ದರೆ ಎಲ್ಲಾ ವಿಚಾರಗಳನ್ನು ಹ್ಯಾಂಡಲ್ ಮಾಡಬಹುದು. ಎಲ್ಲಾ ವಿಚಾರಗಳಿಗೆ ಪರಿಹಾರ ಕೂಡ ಸಿಗುತ್ತೆ.
    5. ಎಲ್ಲರಿಂದ ಏನೋ ಒಂದು ಕಲಿಯುವಂತಹದ್ದು ಇದ್ದೆ ಇರುತ್ತೆ. ಹಾಗಾಗಿ, ಎಲ್ಲರಿಂದ ಎಲ್ಲಾ ವಿಚಾರಗಳ ಬಗ್ಗೆ ಕಲಿಯಿರಿ.
    6. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮರೆಯುವುದನ್ನು ಮತ್ತು ಕ್ಷಮಿಸುವುದನ್ನು ಕಲಿಯಿರಿ.
    7. ನೀವು ಮಾಡಬೇಕು ಅಂದುಕೊಂಡಿದ್ದನ್ನು ಮಾಡಿ. ಕುಟುಂಬಕ್ಕೆ ಸಮಯ ನೀಡಬೇಕು ಅಂದುಕೊಂಡರೆ, ಮೊದಲು ಆ ಕೆಲಸ ಮಾಡಿ. ಪ್ರೀತಿ ಮಾಡಬೇಕು ಅಂದಕೊಂಡರೆ ಪ್ರೀತಿ ಮಾಡಿಬಿಡಿ. ಏನ್ನನ್ನು ಮಾಡಬೇಕು ಅಂದುಕೊಂಡರೆ ಅದನ್ನು ಮೊದಲು ಮಾಡಿಬಿಡಿ.
    8. ಚೆನ್ನಾಗಿ ತಿನ್ನಬೇಕು, ನಿದ್ದೆ ಮಾಡಬೇಕು, ಶ್ರಮ ಪಟ್ಟು ಕೆಲಸ ಮಾಡಬೇಕು. ನಗಬೇಕು ಮತ್ತು ಮುಕ್ತವಾಗಿ ಪ್ರೀತಿಸಬೇಕು.
    9. ಜನರು ನಿಮಗೆ ಯಾವ ವಿಚಾರದಲ್ಲೂ ಸಾಲ ಇಲ್ಲ. ಹಾಗಾಗಿ, ಯಾರಿಂದಲೂ ಏನ್ನನ್ನು ನಿರೀಕ್ಷಿಸಬೇಡಿ. ನೀವೂ ಸಹ ಯಾರಿಗೂ ಉಪಕಾರ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಬಗ್ಗೆ ನೀವು ಹೆಚ್ಚು ಹೆಚ್ಚು ಯೋಚಿಸಿ. ಜೊತೆಗೆ, ಹೆಚ್ಚು ಹೆಚ್ಚು ಕಲಿಯುತ್ತಾ ಮುಂದುವರಿಯಬೇಕು.
    ಸದ್ಯ, ನಟಿ ಬರೆದುಕೊಂಡಿರುವ ಈ ಸಾಲುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಶೇರ್ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ.  

    ಯಾರಿಗೂ ಉಪಕಾರ ಮಾಡಬೇಕಿಲ್ಲ ಎಂದು 5 ವರ್ಷದ ಸಿನಿ ಜರ್ನಿಯಲ್ಲಿ ಕಲಿತೆ: ರಶ್ಮಿಕಾ ಮಂದಣ್ಣ ಯಾರಿಗೂ ಉಪಕಾರ ಮಾಡಬೇಕಿಲ್ಲ ಎಂದು 5 ವರ್ಷದ ಸಿನಿ ಜರ್ನಿಯಲ್ಲಿ ಕಲಿತೆ: ರಶ್ಮಿಕಾ ಮಂದಣ್ಣ

    ದೇವರಾದ ನಟ ಪುನೀತ್! ಡಾರ್ಲಿಂಗ್ ಕೃಷ್ಣಗೆ ಸರಿಯಾದ ದಾರಿ ತೋರಿಸಲಿರುವ ಪವರ್​ಸ್ಟಾರ್…

    400 ಕೋಟಿಯ ‘RRR’ ಚಿತ್ರದ ಪ್ರಚಾರಕ್ಕೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

    ಲ್ಯಾಂಬೋರ್ಗಿನಿ ಹಾಡು ನಂ.1: ಹೊಸ ವರ್ಷಕ್ಕೆ 10 ರೂ.ಗೆ ‘ಲಕ ಲಕ ಲೋಕ’ ತೋರಿಸಿದ ಚಂದನ್, ರಚ್ಚು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts