ರಾಜ್ ಕಪೂರ್ ಮನೆ ಮಾರಾಟಕ್ಕಿದೆಯಂತೆ!

Randhir Kapoor - Final
Published on

ಮುಬೈ: ರಾಜ್ ಕಪೂರ್ ಅವರ ಮೊದಲ ಮಗ ಮತ್ತು ಹಿರಿಯ ನಟ ರಣಧೀರ್ ಕಪೂರ್ ಅವರು ಇತ್ತೀಚೆಗಷ್ಟೇ ಕರೊನಾಗೆ ಪಾಸಿಟಿವ್‌ಗೆ ತುತ್ತಾಗಿ ಇದೀಗ ಕ್ವಾರಂಟೈನ್‌ನಲ್ಲಿದ್ದಾರೆ. ಈ ಮಧ್ಯೆ, ಅವರ ಕಡೆಯಿಂದ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಇಷ್ಟು ದಿನ ಪೂರ್ವಜರ ಮನೆಯಲ್ಲಿದ್ದ ರಣಧೀರ್ ಕಪೂರ್, ಇದೀಗ ಆ ಮನೆಯನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಕುರಿತು ಅವರೇ ಸಂದರ್ಶನವೊAದರಲ್ಲಿ ಸ್ಪಷ್ಟಪಡಿಸಿದ್ದಾರೆ.

ರಣಧೀರ್ ಕಪೂರ್ ಅವರು ಇಷ್ಟು ವರ್ಷಗಳ ಮುಂಬೈನ ಚೆಂಬುರ್‌ನ ರಾಜ್ ಕಪೂರ್ ಅವರ ಮನೆಯಲ್ಲಿ ವಾಸವಿದ್ದರು. ಕೆಲವು ವರ್ಷಗಳ ಹಿಂದೆಯೇ ಪತ್ನಿ ಬಬಿತಾ ಅವರಿಂದ ದೂರವಾಗಿರುವ ರಣಧೀರ್, ಆ ಮನೆಯಲ್ಲ ಒಬ್ಬಂಟಿಯಾಗಿದ್ದರು. ಇತ್ತೀಚಿನ ಕೆಲವು ದಿನಗಳಲ್ಲಿ ಸಹೋದರ ರಾಜೀವ್ ಕಪೂರ್ ಸಹ ರಣಧೀರ್ ಜತೆಗೆ ವಾಸವಿದ್ದರಂತೆ. ಆದರೆ, ಇದೀಗ ರಾಜೀವ್ ಸಹ ನಿಧನರಾಗಿರುವುದರಿಂದ, ರಣಧೀರ್ ತೀರಾ ಒಬ್ಬಂಟಿಯಾಗಿದ್ದಾರAತೆ. ತಮ್ಮ ಹೆಂಡತಿ ಮತ್ತು ಮಕ್ಕಳ ಹತ್ತಿರುವುದಕ್ಕೆ ಅವರು ಬೇರೊಂದು ಕಡೆ ಹೊಸ ಮನೆ ಖರೀದಿಸಿದ್ದಾರಂತೆ. ಹಾಗಾಗಿ, ಈಗಿರುವ ಪೂರ್ವಜರ ಮನೆಯನ್ನು ಮಾರಾಟ ಮಾಡಿ, ಹೊಸ ಮನೆಗೆ ಹೋಗಿ ನೆಲೆಸುತ್ತಾರಂತೆ.

ಈ ಕುರಿತು ಮಾತನಾಡಿರುವ ರಣಧೀರ್, `ನಾನು ಎಷ್ಟು ದಿನ ಬೇಕಾದರೂ ಈ ಮನೆಯಲ್ಲಿ ಇರಬಹುದು ಎಂದು ನನ್ನ ತಂದೆ-ತಾಯಿ ಹೇಳಿದ್ದರು. ಆದರೆ, ಒಂದೊಮ್ಮೆ ನಾನೇನಾದರೂ ಈ ಮನೆಯನ್ನು ಮಾರಾಟ ಮಾಡುವುದಕ್ಕೆ ಮುಂದಾದರೆ, ಬರುವ ಹಣವನ್ನು ಎಲ್ಲ ಸಹೋದರ, ಸಹೋದರಿಯರಿಗೂ ಹಂಚಬೇಕು ಎಂದು ಹೇಳಿದ್ದರು. ಇಷ್ಟು ವರ್ಷಗಳ ಕಾಲ ಈ ಮನೆಯಲ್ಲಿದ್ದೇನೆ. ಇದೀಗ ಈ ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ. ಹಾಗಾಗಿ ಮನೆ ಮಾರಾಟ ಮಾಡಿ, ಮಕ್ಕಳ ಹತ್ತಿರ ಇರುವುದಕ್ಕೆ ಯೋಚಿಸಿದ್ದೇನೆ. ಸದ್ಯದಲ್ಲೇ ಮನೆ ಮಾರಾಟವಾಗಲಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net