‘ಬರ್ಕ್ಲಿ’ ಟೀಸರ್ ಬಂದೇ ಬಿಡ್ತು; ಮಾಸ್​, ಕ್ಲಾಸ್​ ಲುಕ್​ನಲ್ಲಿ ಸಂತೋಷ್

WhatsApp Image 2021-04-28 at 7.02.28 PM
Published on

ಬೆಂಗಳೂರು: ಸುಮಂತ್ ಕ್ರಾಂತಿ ನಿರ್ದೇಶನದ ‘ಬರ್ಕ್ಲಿ’ ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆ ಆಗಿದೆ. ಪಕ್ಕಾ ಮಾಸ್​ ಅಂಶವಿರುವ ಟೀಸರ್​ನಲ್ಲಿ ಅಬ್ಬರದ ಡೈಲಾಗ್​ ಜತೆಗೆ ಖಡಕ್​ ಆ್ಯಕ್ಷನ್​ ಸೀನ್​ಗಳೂ ಹೇರಳವಾಗಿವೆ. ಪ್ರೀತಿ ಪ್ರೇಮದ ಎಳೆಯೂ ಟೀಸರ್​ನಲ್ಲಿ ಕಾಣಿಸುತ್ತದೆ.

ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸುತ್ತಿರುವ ‘ಬರ್ಕ್ಲಿ’ ಚಿತ್ರದ ಪ್ರಥಮ ಪ್ರತಿ‌ ಸಿದ್ಧವಾಗಿದ್ದು, ಲಾಕ್​ಡೌನ್​ ಮುಗಿದ ನಂತರ ಚಿತ್ರ ಬಿಡುಗಡೆಯಾಗಲಿದೆ. ‘ಕರಿಯ’, ‘ಗಣಪ’, ‘ಕರಿಯ ೨’ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ‘ಬರ್ಕ್ಲಿ‌’ ಚಿತ್ರವನ್ನು ನಿರ್ಮಿಸಿದ್ದಾರೆ.


‘ಗಣಪ’, ‘ಕರಿಯ 2’ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾದರೆ, ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ಚರಣರಾಜ್, ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

‘ಬಹದ್ದೂರ್’ ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net