ಜೂನಿಯರ್ ರಣಬೀರ್​ ಕಪೂರ್​ ಸಾವು; ಕಾರಣ ಏನಿರಬಹುದು?

junaid sha
Published on

ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇಂಟರ್​ನೆಟ್​ನಲ್ಲಿ ಸೆನ್ಸೆಷನ್​ ಸೃಷ್ಟಿಸಿದ್ದರು. ರಣಬೀರ್ ಅವರಂತೆ ಫೋಟೋಶೂಟ್​ ಮಾಡಿಸಿ, ಅವರಂತೆ ಬಾಡಿ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದರು. ಹೌದು, ಕಾಶ್ಮೀರ ಮೂಲದ ಜುನೇದ್​ ಶಾ, ಥೇಟ್ ನೋಡಲು ರಣಬೀರ್ ಕಪೂರ್​ ಅವರನ್ನೇ ಹೊಲುತ್ತಿದ್ದರು. ಆದರೆ, ಇದೀಗ ​​ಅದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಶ್ರೀನಗರದ ಇಲಾಹಿ ಭಾಗ್​ನಲ್ಲಿ ಶುಕ್ರವಾರ ಕಾರ್ಡಿಯಾಕ್​ ಅರೆಸ್ಟ್ (ಹೃದಯ ಸ್ತಂಭನ)ನಿಂದಾಗಿ ಜುನೈದ್​ ಕೊನೆಯುಸಿರೆಳೆದಿದ್ದಾರೆ.

ಅಂದಹಾಗೆ, ಜುನೈದ್​ ಶಾ ಸೋಷಿಯಲ್​ ಮೀಡಿಯಾದಲ್ಲಿ ಜೂನಿಯರ್ ರಣಬೀರ್ ಎಂದೇ ಹೆಸರು ಮಾಡಿದ್ದರು. ಜುನೈದ್​ ಫೋಟೋ ನೋಡಿದ್ದ ರಿಷಿ ಕಪೂರ್​, ಟ್ವಿಟರ್​ನಲ್ಲಿ ಮಗ ರಣಬೀರ್ ಮತ್ತು ಜುನೈದ್​ ಅವರ ಫೋಟೋ ಶೇರ್​ ಮಾಡಿಕೊಂಡು, ‘ಅರೇ ನನ್ನ ಮಗನಂತೆ ಇಲ್ಲೊಬ್ಬ ಇದ್ದಾನೆ. ನಂಬಲು ಆಗುತ್ತಿಲ್ಲ’ ಎಂದು ಟ್ವಿಟ್​ ಮಾಡಿಕೊಂಡಿದ್ದರು.

ಇನ್ನು ಮಾಡೆಲಿಂಗ್​ ಮತ್ತು ಸಿನಿಮಾ ಕಲಿಕೆಯಲ್ಲಿ ತೊಡಗಿಸಿಕೊಂಡು ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲಿಯೇ ವಾಸವಾಗಿದ್ದ ಜುನೈದ್,​ ಇತ್ತೀಚೆಗಷ್ಟೇ ಶ್ರೀನಗರಕ್ಕೆ ಆಗಮಿಸಿದ್ದರು. ಆದರೆ, ಇದೀಗ ಕಾರ್ಡಿಯಾಕ್​ ಅರೆಸ್ಟ್ ನಿಂದಾಗಿ ಸಾವನ್ನಪ್ಪಿದ್ದಾರೆ. ​ ಅವರ ಸಾವಿಗೆ ಅವರ ಅಭಿಮಾನಿ ಬಳಗ ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net