ಮಾಲ್ಡೀವ್ಸ್​ನಲ್ಲಿ ಜಾಕಿ​ ಜತೆ ರಾಕುಲ್​! ಫೋಟೋ ವೈರಲ್... ಇದೇ ವರ್ಷದಲ್ಲಿ ಮದುವೆ?

Published on
ಮಾಲ್ಡೀವ್ಸ್: ದಕ್ಷಿಣ ಭಾರತದ ಖ್ಯಾತ ನಟಿ ರಾಕುಲ್ ಪ್ರೀತ್​ ಸಿಂಗ್​ಗೆ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇತ್ತೀಚೆಗೆ, ಅವರು ಬಾಲಿವುಡ್​ಗೂ ಲಗ್ಗೆ ಇಟ್ಟಿದ್ದಾರೆ. ಈಗಾಗಲೇ, ಅನೇಕ ಸ್ಟಾರ್ ನಟರ ಜತೆಗೆ ನಟಿ ರಾಕುಲ್ ಅವರು ಪರದೆ ಶೇರ್ ಮಾಡಿಕೊಂಡಿದ್ದಾರೆ. ಹೀಗಿದ್ದರೂ, ನಟಿ ಕೆಲವು ದಿನಗಳಿಂದ ತಮ್ಮ ಸಿನಿಮಾಗಳು ಮತ್ತು ಕೆಲಸಗಳಿಗಿಂತಾ ಅವರ ವೈಯಕ್ತಿ ಜೀವನದ ವಿಚಾರವಾಗಿ ಮಾಧ್ಯಮಗಳಲ್ಲಿ ಸಖತ್ ಸೌಂಡು ಮಾಡುತ್ತಿದ್ದಾರೆ. ಹೌದು, ಜಾಕಿ ಭಗ್ನಾನಿ ಅವರ ಜತೆ ಡೇಟಿಂಗ್ ಮಾಡುತ್ತಿರುವ ರಾಕುಲ್, ಈಗ ಮಾಲ್ಡೀವ್ಸ್​ನಲ್ಲಿದ್ದಾರೆ.
ನಟಿ ರಾಕುಲ್​ ಹಾಗೂ ಜಾಕಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷದ ಅಂತ್ಯದಲ್ಲಿ ಇವರಿಬ್ಬರ ಮದುವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸಮಯದಲ್ಲಿ, ಮಾಲ್ಡೀವ್ಸ್​ನಲ್ಲಿ ರಾಕುಲ್ ಬಾಯ್​ಫ್ರೆಂಡ್ ಜತೆಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಅನುಮಾನಗಳನ್ನು ಹೆಚ್ಚು ಮಾಡುತ್ತಿವೆ. ಸದ್ಯ, ಇವರಿಬ್ಬರು ಮಾಲ್ಡೀವ್ಸ್​ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳಿಬ್ಬಿಸುತ್ತಿವೆ. ಅಂದಹಾಗೆ, ರಾಕುಲ್ ಅವರ ಚಾಯ್ಸ್ ಆದ ಜಾಕಿ ಅವರು ನಟಿಯ ಅಭಿಮಾನಿಗಳಿಗೆ ಕೂಡಾ ಇಷ್ಟವಾಗಿದ್ದು, ಅಭಿಮಾನಿಗಳು ರಾಕುಲ್​ಗೆ ಶುಭಕೋರಿದ್ದಾರೆ.
ರಾಕುಲ್ ಹಾಗೂ ಜಾಕಿ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಇವರಿಬ್ಬರೂ ತಾಜ್​ಮಹಲ್​ಗೆ ಕೂಡಾ ಭೇಟಿ ಕೊಟ್ಟಿದ್ದರು. ಆ ಫೋಟೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು. ಅಂದಹಾಗೆ, ಜಾಕಿ ಅವರು ಕೂಡಾ ನಟನಾಗಿದ್ದು, ಹಲವು ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಎಲ್ಲಾ ಫೋಟೋಗಳಿಗು ಮಿಲಿಯನ್ ಗಟ್ಟಲೇ ಲೈಕ್ಸ್ ಮತ್ತು ಸಾವಿರ ಸಾವಿರ ಕಾಮೆಂಟ್​ಗಳು ಹರಿದುಬರುತ್ತವೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net