ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ‘ರಾಧೆ ಶ್ಯಾಮ್' ಚಿತ್ರ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ 5 ಭಾಷೆಗಳಲ್ಲಿ, ಅಂದರೆ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ, ನಟ ಶಿವರಾಜ್ಕುಮಾರ್ ಅವರು 'ರಾಧೆ ಶ್ಯಾಮ್' ಚಿತ್ರದ ಕನ್ನಡ ಅವತರಣಿಕೆಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಡಬ್ಬಿಂಗ್ ನಡೆದಿದ್ದು, ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಧ್ವನಿ ನೀಡಿದ್ದಾರೆ.