ನಟಿ ಅಮೂಲ್ಯ ತಾಯಿಯಾಗುತ್ತಿರುವ ಸಂತೋಷವನ್ನು ಕೆಲ ತಿಂಗಳ ಹಿಂದಷ್ಟೆ ಅಭಿಮಾನಿಗಳಿಗೆ ಹಂಚಿಕೊಂಡಿದ್ದು, ಅದ್ಧೂರಿಯಾಗಿ ಸೀಮಂತ ಕೂಡಾ ಮಾಡಿಕೊಂಡಿದ್ದರು. ಹೌದು, ಮೊದಲು ಅಮೂಲ್ಯಗೆ ಪತಿ ಜಗದೀಶ್ ಅವರ ಕುಟುಂಬಸ್ಥರು ಬಹಳ ಗ್ರ್ಯಾಂಡ್ ಆಗಿ ಸೀಮಂತ ಮಾಡಿದ್ದು, ಬಳಿಕ ಇಡೀ ಕನ್ನಡ ಚಿತ್ರರಂಗದ ತಾರೆಯರು ಅವರಿಗೆ ಬೇಬಿ ಶವರ್ ಪಾರ್ಟಿ ಮಾಡಿದ್ದರು. ಈಗಾಗಲೇ, ಮೂರು ಬಾರಿ ನಟಿ ಅಮೂಲ್ಯಾ ಬೇಬಿ ಬಂಪ್ ಫೋಟೋಶೂಟ್ಗಳನ್ನು ಮಾಡಿಸಿದರು. ಇನ್ನು ಈ ಎಲ್ಲಾ ಸಂದರ್ಭಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು. ಇದೀಗ, ನಟಿ ಅಮೂಲ್ಯ ಮತ್ತೊಂದು ಬೇಬಿ ಬಂಬ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.