ಇದೀಗ, ಎರಡೂ ಹಾಡುಗಳು ಬಿಡುಗಡೆಯಾಗಿದ್ದು, 'ಕಲಾವತಿ' ಮತ್ತು 'ಅರೇಬಿಕ್ ಕುತ್ತು' ಎರಡೂ ಕೂಡಾ ಸೂಪರ್ ಹಿಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ದಾಖಲೆಗಳನ್ನು ಮುರಿದಿವೆ. ಆದರೆ, ನಟ ವಿಜಯ್ ಅವರ 'ಅರೇಬಿಕ್ ಕುತ್ತು' ಹಾಡಿಗೆಯೇ ಹೆಚ್ಚು ವೀಕ್ಷಣೆಗಳು ಮತ್ತು ಲೈಕ್ಸ್ ಬಂದಿದ್ದು, ಮಹೇಶ್ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಹಾಗಾಗಿ, ಇಬ್ಬರೂ ನಟರ ನಡುವಿನ ಹಗ್ಗಜಗ್ಗಾಟ ಈಗಲೂ ಮುಂದುವರಿದಿದ್ದು, ಈ ಕಾಂಪಿಟಿಷನ್ ಮತ್ತು ಜಗಳ ಎರಡೂ ಸಿನಿಮಾಗಳು ತೆರೆಗಪ್ಪಳಿಸಿದ ನಂತರವೂ ಮುಂದುವರಿಯಲೆದೆ ಎಂದೇ ಹೇಳಬೇಕು.