ಅಂದಹಾಗೆ, ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್ಗೂ ಒಳ್ಳೆಯ ಸಂಬಂಧವೇನಿಲ್ಲ. ಟಿಡಿಪಿ ಹಾಗೂ ರಾಜಕಾರಣಿಯೂ ಆಗಿರುವ ನಟ ಪವನ್ ನಡುವಿನ ರಾಜಕೀಯ ವೈಷಮ್ಯದ ಬಗ್ಗೆ ಬಹುತೇಕ ಎಲ್ಲಿರಿಗೂ ಗೊತ್ತಿರುತ್ತೆ. ಆದರೆ, 'ಭೀಮ್ಲಾ ನಾಯಕ್' ಚಿತ್ರದ ವಿಚಾರದಲ್ಲಿ ಬಹುತೇಕ ಎಲ್ಲರ ಮನಸ್ಸು ಕರಗಿದೆ ಅನಿಸುತ್ತೆ. ಯಾಕೆಂದರೆ, ಜಗನ್ ಅವರು ನಟ ಪವನ್ಗೆ ಕೊಡುತ್ತಿರುವ ಕಿರುಕುಳ ಅಂತಿಂಥದ್ದಲ್ಲ. ಈ ಹಿಂದೆ ರಿಲೀಸ್ ಆದ ಪವನ್ ಅವರ ಸಿನಿಮಾ 'ವಕೀಲ್ ಸಾಬ್'ಗೂ ಜಗನ್ ಸರ್ಕಾರ ಇದೇ ರೀತಿ ತೊಂದರೆ ನೀಡಿತ್ತು. ಆಂಧ್ರದಲ್ಲಿ ಈಗ ಸಿನಿಮಾ ವಿಷಯ ರಾಜಕೀಯ ವಿಷಯವಾಗಿ ಪರಿವರ್ತಿತಗೊಂಡಿದೆ. ''ಪವನ್ VS ಜಗನ್ ಸರ್ಕಾರ'' ಅನ್ನೋದು ಇದೀಗ ಆಂಧ್ರದಲ್ಲಿ ''ಪವನ್, ಟಿಡಿಪಿ, ಬಿಜೆಪಿ, ಟಾಲಿವುಡ್ VS ಜಗನ್ ಸರ್ಕಾರ'' ಆಗಿದೆ ಎಂದರೇ ತಪ್ಪಾಗುವುದಿಲ್ಲ. ಆದರೆ, ಇದೆಲ್ಲದರ ನಡುವೆ ಪವನ್ ಅಭಿಮಾನಿಗಳಿಗೆ ಮಾತ್ರ ತುಂಬಾನೇ ನಿರಾಸ ಎದುರಾಗುತ್ತಿದೆ.