More

    ಜಗನ್ vs ಪವನ್​: ಭೀಮ್ಲಾ ನಾಯಕ್​ ಚಿತ್ರಕ್ಕೆ ಆಂಧ್ರದಲ್ಲಿ ಉಂಟಾದ ನಷ್ಟದ ಮೊತ್ತ ಹೀಗಿದೆ…

    ವಿಜಯವಾಡ: ಪವನ್​ ಕಲ್ಯಾಣ್​ ಅಭಿನಯದ ಭೀಮ್ಲಾ ನಾಯಕ್​ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಆಂಧ್ರದಲ್ಲಿ ಭಾರೀ ಹೊಡೆತ ಬಿದ್ದಿದ್ದೆ. ರಾಜಕೀಯ ವೈಷಮ್ಯ ಹಾಗೂ ಸಿನಿಮಾ ಟಿಕೆಟ್​ ಮೇಲೆ ಆಂಧ್ರ ಸರ್ಕಾರದ ಹೊರಡಿಸಿರುವ ಹೊಸ ನಿಯಮಗಳಿಂದ ಆಂಧ್ರ ವಲಯದಲ್ಲಿ ಚಿತ್ರದ ಕಲೆಕ್ಸನ್​ ಕಡಿಮೆ ಆಗಿದೆ.

    ಹೊಸ ಟಿಕೆಟ್​ ನಿಯಮವನ್ನು ನ್ಯಾಯಾಲಯ ತೆಗೆದುಹಾಕಿದ್ದರೂ ಕೂಡ ಈ ಕುರಿತು ಅಂತಿಮ ತೀರ್ಪು ಬಾರದೇ ಇರುವುದು ದೊಡ್ಡ ಸಿನಿಮಾಗಳ ಮೇಲೆ ಇದು ಹೊಡೆತ ಬಿದ್ದಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆಯಾದ ಅವರ ವಕೀಲ್​ ಸಾಬ್​ ಸಿನಿಮಾ ಆಂಧ್ರ ವಲಯದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 23.6 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿತ್ತು. ಆದರೆ, ಈ ಬಾರಿ ಅರ್ಧದಷ್ಟು ಕುಸಿದಿದೆ ಅಂದರೆ, 14.5 ಕೋಟಿ ರೂ. ಮಾತ್ರ ಗಳಿಕೆ ಮಾಡಿದ್ದು, 10 ಕೋಟಿ ರೂ. ನಷ್ಟವಾಗಿದೆ.

    ಕಳೆದ ಕೆಲವು ತಿಂಗಳಿಂದ ಆಂಧ್ರ ಸರ್ಕಾರ ಮತ್ತು ಸಿನಿಮಾ ಇಂಡಸ್ಟ್ರಿ ನಡುವೆ ಟಿಕೆಟ್​ ದರ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದೆ. ಸಿನಿಮಾ ಟಿಕೆಟ್​ಗಳ ದರವನ್ನು ಸರ್ಕಾರ ಕಡಿತಗೊಳಿಸಿರುವುದು ಚಿತ್ರರಂಗದ ಹತಾಶೆಗೆ ಕಾರಣವಾಗಿದೆ. ಹೀಗಾಗಿ ಅನೇಕ ನಟರು ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ತಮ್ಮದೇಯಾದ ಜನಸೇನಾ ಪಕ್ಷ ಕಟ್ಟಿಕೊಂಡಿರುವ ಪವನ್​ ಕಲ್ಯಾಣ್​ ರಾಜಕೀಯವಾಗಿ ಸಿಎಂ ಜಗನ್​ಗೆ ಎದುರಾಳಿಯಾಗಿದ್ದಾರೆ. ಅಲ್ಲದೆ, ಆಗಾಗ ಅನೇಕ ವಿಚಾರಗಳಿಗೆ ಜಗನ್​ರನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.

    ರಾಜಕೀಯ ವೈಷ್ಯಮದ ನಡುವೆಯೇ ಪವನ್​ ಚಿತ್ರ ಬಿಡುಗಡೆಯಾಗಿದ್ದು, ಥಿಯೇಟರ್​ಗಳು ಹೊಸ ನಿಯಮವನ್ನು ಮೀರದಂತೆ ನೋಡಿಕೊಳ್ಳಲು ಜಗನ್​ ಸರ್ಕಾರ ಸಿಆರ್‌ಪಿಎಫ್ ಯೋಧರನ್ನು ಮತ್ತು ಒಂದು ಪ್ರತ್ಯೇಕ ದಳವನ್ನು ಸೃಷ್ಟಿಸಿ ಪ್ರತಿ ಚಿತ್ರಮಂದಿರಕ್ಕೂ ಕಾವಲು ವಿಧಿಸಿದೆ ಎಂದು ಹೇಳಲಾಗಿದೆ. ಯೋಧರ ಪ್ರಯಾಣ ಹಾಗೂ ದಿನದ ಭತ್ಯೆ, ಜತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಭತ್ಯೆ ಇತರೆಗಳನ್ನು ಲೆಕ್ಕ ಹಾಕಿದರೆ ಒಂದು ದಿನಕ್ಕೆ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಸರ್ಕಾರ ನಿಯಮಪಾಲನೆ ಪರಿಶೀಲನೆಗೆ ಖರ್ಚು ಮಾಡುತ್ತಿದೆ ಎನ್ನಲಾಗಿದೆ.

    ಟಿಕೆಟ್ ದರ ಇಳಿಕೆ ನಿಯಮವನ್ನು ಪರಿಶೀಲಿಸುವಂತೆ ಈಗಾಗಲೇ ಮೆಗಾಸ್ಟಾರ್​ ಚಿರಂಜೀವಿ, ರಾಜಮೌಳಿ ಮತ್ತು ಮಹೇಶ್​ ಬಾಬು ಸೇರಿದಂತೆ ಪ್ರಮುಖ ನಟರ ತಂಡವೊಂದು ಜಗನ್​ರನ್ನು ಭೇಟಿ ಮಾಡಿ ಚರ್ಚಿಸಿದ್ದು, ಜಗನ್​ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಟಿಕೆಟ್​ ನಿಯಮವನ್ನು ಸರ್ಕಾರ ಮತ್ತೆ ಪರಿಶೀಲಿಸುವ ಮೊದಲೇ ‘ಭೀಮ್ಲಾ ನಾಯಕ್‘ ಚಿತ್ರ ರಿಲೀಸ್ ಆಗಿದ್ದು, ಇದರಿಂದ, ಆಂಧ್ರದಲ್ಲಿ ಮತ್ತೆ ‘ಪವನ್ v/s ಜಗನ್ ಸರ್ಕಾರ‘ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಿದೆ. (ಏಜೆನ್ಸೀಸ್​)

    ‘ಭೀಮ್ಲಾ ನಾಯಕ್’ ಅಬ್ಬರ ತಡೆಯಲು ದಿನವೊಂದಕ್ಕೆ 3 ಕೋಟಿ ರೂ. ಖರ್ಚು ಮಾಡುತ್ತಿರುವ ಜಗನ್?

    ವಿದ್ಯುತ್​ ಬೇಡಿಕೆ ಹೆಚ್ಚಳ: ರಾಜ್ಯಕ್ಕೆ ಕಾಡಲಿದೆ ಲೋಡ್​ಶೆಡ್ಡಿಂಗ್​?

    ಕಿಚ್ಚ ಸುದೀಪ್​ ಕೈಯಲ್ಲಿದೆ ದುಬಾರಿ ವಾಚ್​: ಇದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts