More

    ಕಿಚ್ಚ ಸುದೀಪ್​ ಕೈಯಲ್ಲಿದೆ ದುಬಾರಿ ವಾಚ್​: ಇದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

    ಬೆಂಗಳೂರು: ಸೆಲೆಬ್ರಿಟಿಗಳದ್ದು ದುಬಾರಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್​ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ತುಂಬಾ ದುಬಾರಿಯಾಗಿರುತ್ತವೆ. ಒಮ್ಮೆಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೀವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.

    2020ನೇ ಸಾಲಿನ ಪ್ರೆಸ್​ಕ್ಲಬ್​ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್​ಜಿ ಹಾಗೂ ಮಾಜಿ ಸಿಎಂ ಬಿಎಸ್​ವೈ ಭಾಜನಾರಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಮೊನ್ನಯಷ್ಟೇ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಕಿಚ್ಚ ಸುದೀಪ್​ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

    ವಿಷಯ ಏನೆಂದರೆ, ವೈರಲ್​ ಆಗಿರುವ ಫೋಟೋದಲ್ಲಿ ಸುದೀಪ್​ ಅವರ ವಾಚ್​ ನೆಟ್ಟಿಗರ ಗಮನ ಸೆಳೆದಿದೆ. ಈ ವಾಚ್​ ಬೆಲೆ ಎಷ್ಟಿರಬಹುದು ಯಾರಾದರೂ ಹೇಳುತ್ತಿರಾ ಎಂದು ಕೇಳಿದ್ದಾರೆ. ಕಾಮೆಂಟ್​ ಮೂಲಕ ಅನೇಕರು ಉತ್ತರವನ್ನು ನೀಡಿದ್ದಾರೆ.

    ಅಂದಹಾಗೆ ಕಿಚ್ಚ ಧರಿಸಿರುವ ವಾಚ್ ಪ್ರಖ್ಯಾತ ಫ್ರ್ಯಾಂಕ್​ ಮುಲ್ಲರ್ ಕಂಪನಿಯ​ ವಾಚ್.​ ಇದು ತುಂಬಾ ದುಬಾರಿ ಬೆಲೆಯ ವಾಚ್​. ಸಾಮಾನ್ಯ ಜನರು ಇದರ ಬೆಲೆಯನ್ನು ಕೇಳಿದರೆ ತಲೆ ತಿರುಗುವುದಂತೂ ಗ್ಯಾರೆಂಟಿ.​ ಫ್ರ್ಯಾಂಕ್​ ಮುಲ್ಲರ್​ ವ್ಯಾಂಗಾರ್ಡ್​ ಕ್ರೇಜಿ ಹವರ್ಸ್​ ಹೆಸರಿನ ಈ ವಾಚ್​ನ ಬೆಲೆ 30,469 ಡಾಲರ್​ ಅಂದರೆ, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 22,87,475 ರೂಪಾಯಿ ಮೌಲ್ಯದ್ದಾಗಿದೆ.

    ಕಿಚ್ಚ ಸುದೀಪ್​ ಕೈಯಲ್ಲಿದೆ ದುಬಾರಿ ವಾಚ್​: ಇದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

    ಇತ್ತೀಚೆಗಷ್ಟೇ ನಟ ಯಶ್​ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಯಶ್​ ಅವರ ದುಬೈ ಭೇಟಿಯ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿತ್ತು. ಈ ವೇಳೆ ಯಶ್​ ಧರಿಸಿರುವ ವಾಚ್​ ಮೇಲೆ ಅಭಿಮಾನಿಗಳ ಕಣ್ಣಿಗೆ ಬಿದ್ದಿತ್ತು. ವಾಚ್​ನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಮನೆ ಮಾಡಿತ್ತು. ಯಶ್​ ಅವರು Rolex GMT Master 2 ವಾಚ್​ ಧರಿಸಿದ್ದಾರೆ. ಇದರ ಬೆಲೆ 9,500 ಅಮೆರಿಕ ಡಾಲರ್​ ಆಗಿದೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 7, 17,227 ರೂ. ಆಗಿದೆ. (ಏಜೆನ್ಸೀಸ್​)

    ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!

    ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ…ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!

    ಯೂಕ್ರೇನ್​ನಲ್ಲಿ ಸಿಲುಕಿರುವ ಪುತ್ರಿ: ಅನಿರೀಕ್ಷಿತ ಫೋನ್​ ಕಾಲ್​ ಸ್ವೀಕರಿಸಿದ ಮಹಿಳೆಗೆ ಖುಷಿಯ ಬೆನ್ನಲ್ಲೇ ಬಿಗ್​ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts