ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ...ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!

Vidhika
Published on

ನವದೆಹಲಿ: ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಹಾಗೂ ಸ್ಯಾಂಡಲ್​ವುಡ್​​ ಸೆಲೆಬ್ರಿಟಿಗಳ ನೆಚ್ಚಿನ ತಾಣ ಅಂದರೆ ಅದು ಮಾಲ್ಡೀವ್ಸ್​. ಶೂಟಿಂಗ್​ ಬಿಡುವಿನ ವೇಳೆ ಆಗಾಗ ಮಾಲ್ಡೀವ್ಸ್​ಗೆ ನಟಿಯರು ಭೇಟಿ ನೀಡುತ್ತಿರುತ್ತಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಆಗಾಗ ಅವುಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿರುತ್ತಾರೆ.

ಈ ಸಲ ನೀಳ ಕಾಯದ ಚೆಲುವೆ 33 ವರ್ಷದ ವೇದಿಕಾ ಮಾಲ್ಡೀವ್ಸ್​ನಲ್ಲಿ ಠಿಕಾಣಿ ಹೂಡಿ ಮರಳಿದ್ದು, ಬಗೆಬಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡು ಕಪ್ಪು ಬಣ್ಣದ ಬಿಕಿನಿ ಹಾಗೂ ಸನ್​ಗ್ಲಾಸ್​ ಹಾಕಿಕೊಂಡು ನಡೆದುಕೊಂಡು ಬರುತ್ತಿರುವ ಫೋಟೋವನ್ನು ವೇದಿಕಾ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ವೇದಿಕಾರ ಹಾಟ್​ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಫೋಟೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವೇದಿಕಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್​ ಅಭಿನಯದ ಶಿವಲಿಂಗ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ವೇದಿಕಾ ಪರಿಚಿತರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಬಂಗಾರರಾಜು ಸಿನಿಮಾ ಸಾಂಗ್​ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಜಂಗಲ್​ ಹೆಸರಿನ ದ್ವಿಭಾಷ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net