More

    ವಿದ್ಯುತ್​ ಬೇಡಿಕೆ ಹೆಚ್ಚಳ: ರಾಜ್ಯಕ್ಕೆ ಕಾಡಲಿದೆ ಲೋಡ್​ಶೆಡ್ಡಿಂಗ್​?

    ರಾಯಚೂರು: ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ವಿದ್ಯುತ್​ ಬೇಡಿಕೆ ಗಣನೀಯ ಏರಿಕೆಯಾಗುತ್ತಿದೆ. ಪ್ರಸ್ತುತ ರಾಜ್ಯದ ವಿದ್ಯುತ್​ ಬೇಡಿಕೆ 14 ಸಾವಿರ ಮೆಗಾವಾಟ್​ ಗಡಿ ದಾಟುವ ಮೂಲಕ ಕಳೆದ ದಶಕದಲ್ಲಿ ಗರಿಷ್ಠ ಪ್ರಮಾಣಕ್ಕೆ ಮುಟ್ಟಿದೆ. ಇದು ಮುಂದಿನ ದಿನಗಳಲ್ಲಿ ಲೋಡ್​ಶೆಡ್ಡಿಂಗ್​ಗೆ ಕಾರಣವಾಗಬಹುದು.

    ಕಳೆದ ನಾಲ್ಕು ವರ್ಷಗಳ ಹಿಂದೆ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್​ 14,200 ಮೆವಾಗೆ ತಲುಪಿದ್ದು, ಇದೇ ಗರಿಷ್ಠ ಬೇಡಿಕೆಯಾಗಿತ್ತು. ಕಳೆದೊಂದು ವಾರದಿಂದ ಬೇಡಿಕೆ 14 ಸಾವಿರ ಮೆಗಾ ಗಡಿ ದಾಟಿದ್ದು, ಶುಕ್ರವಾರ 14,674 ಮೆವಾಗೆ ಏರಿಕೆಯಾಗಿದೆ. ಈ ಕಾರಣಕ್ಕೆ ರಾಜ್ಯದ ಶಾಖೋತ್ಪನ್ನ ವಿದ್ಯುತ್​ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗಿದೆ.

    ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾದಂತಹ ಅನಿವಾರ್ಯತೆ ಕೆಪಿಸಿಎಲ್​ಗೆ ಎದುರಾಗಿದೆ. ಸೌರ-ಪವನ ಮೂಲಗಳಿಂದ ಹೆಚ್ಚಿನ ವಿದ್ಯುತ್​ ಉತ್ಪಾದನೆಯಾಗುತ್ತಿದ್ದರೂ, ರಾತ್ರಿ ಸಮಯ ಬೇಡಿಕೆ ಸರಿದೂಗಿಸುವುದು ಸಮಸ್ಯೆಯಾಗಿದೆ.

    ಯೂಕ್ರೇನ್​ನಿಂದ ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದ 12 ವಿದ್ಯಾರ್ಥಿಗಳು! ಕುಟುಂಬಸ್ಥರ ಮೊಗದಲ್ಲಿ ಸಂತೋಷ

    ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು! ಇದು ಸಿನಿಮಾ ಕಥೆಯಲ್ಲ, ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ನಡೆದ ಘಟನೆ

    ಯೂಕ್ರೇನ್​ನಲ್ಲಿ ಮದ್ವೆ ಆದ ಮರುದಿನವೇ ಗನ್​ ಹಿಡಿದು ದೇಶ ರಕ್ಷಣೆಗೆ ನಿಂತ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts