ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು! ಇದು ಸಿನಿಮಾ ಕಥೆಯಲ್ಲ, ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ನಡೆದ ಘಟನೆ

ದೊಡ್ಡಬಳ್ಳಾಪುರ: ಇನ್ನೇನು ಎಟಿಎಂ ಯಂತ್ರ ಒಡೆದು ಹಣ ಎಗರಿಸಬೇಕೆನ್ನುವಷ್ಟರಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದ ಕಳ್ಳರಿಬ್ಬರು ತಕ್ಷಣ ಕಾಲಿಗೆ ಬುದ್ಧಿ ಹೇಳುತ್ತಾರೆ. ಆದರೂ ಜನ ಬೆನ್ನಟ್ಟುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದಕ್ಕೆ ಕೈಅಡ್ಡಹಾಕಿದ ಕಳ್ಳರು ಡ್ರಾಪ್ ಕೇಳಿದ್ರು. ಕಾರು ನಿಲ್ಲುತ್ತಿದ್ದಂತೆ ಅದರೊಳಗೆ ಹತ್ತಿ ಅಬ್ಬಾ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್​ ಠಾಣೆ ಮುಂದೆ ನಿಲ್ಲುತ್ತೆ. ಅರೇ ಇದ್ಹೇನಿದು? ಎಂದು ಕಳ್ಳರು ಪಿಳಿಪಿಳಿ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಗೊತ್ತಾಗುತ್ತೇ ತಾವು ಡ್ರಾಪ್​ ಕೇಳಿದ್ದು … Continue reading ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು! ಇದು ಸಿನಿಮಾ ಕಥೆಯಲ್ಲ, ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ನಡೆದ ಘಟನೆ