ಅಭಿಮಾನಿಗಳ ಸಂಭ್ರಮಾಚರಣೆ: ಇನ್ನು, 1975ರಲ್ಲಿ ಬಿಡುಗಡೆಯಾದ 'ಅಪೂರ್ವ ರಾಗಂಗಳ್' ಸಿನಿಮಾದಿಂದ ಕಲಾರಂಗಕ್ಕೆ ರಜನಿ ಪಾರ್ದಾಪಣೆ ಮಾಡಿದ್ದು, ಅಲ್ಲಿಂದ ಈಗೀನ 'ಅಣ್ಣಾತೆ'ವೆರೆಗೆ ಜನರ ನೆಚ್ಚಿನ ತಲೈವಾ ಎನಿಸಿಕೊಂಡ ನಟನ ಜೀವನದಲ್ಲಿ ಬಹು ದೊಡ್ಡ ಪಾತ್ರವಹಿಸಿದ್ದು ಅವರ ಅಭಿಮಾನಿಗಳು ಎಂದೇ ಹೇಳಿಬೇಕು. ನಟನ ಸಿನಿಮಾ ಬಿಡುಗಡೆಯಾದರೆನೆ ಅವರ ಅಭಿಮಾನಿಗಳನ್ನು ಹಿಡಿಯಲು ಸಾಧ್ಯವಿಲ್ಲ. ಹಾಗಿದ್ದರೆ, ರಜನಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಎಷ್ಟು ಸೂಪರ್ ಎಕ್ಸೈಟ್ ಆಗಿರುತ್ತಾರೆಂದು ವರ್ಣಿಸಲು ಸಾಧ್ಯವಿಲ್ಲ. ಇವತ್ತು, ಸೌತ್ನ ನಾಲ್ಕು ರಾಜ್ಯಗಳಲ್ಲಿ ತಲೈವಾ ಅವರ ಹುಟ್ಟುಹಬ್ಬ ಸಂಭ್ರಮದ್ದೆ ಹವಾ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವುದು ಅಲ್ಲದೇ, ರಜನಿ ಅವರ ವಯಸ್ಸಿನ ಬಗ್ಗೆ ಒಂದಿಷ್ಟು ಮೀಮ್ಗಳು ಹರಿದಾಡುತ್ತಿವೆ. ಅವುಗಳ ಪೈಕಿ ಒಂದು ಮೀಮ್ ಮಾತ್ರ ಸದ್ಯ ಎಲ್ಲರ ಗಮನ ಸೆಳೆದಿದೆ. ಅದು, 'ರಜನಿಗೆ ವಯಸ್ಸಾಗುವುದಿಲ್ಲ, ಬದಲಿಗೆ ಆ ಸಮಯಕ್ಕೆ ವಯಸ್ಸಾಗುತ್ತೆ' ಎಂಬ ಮೀಮ್ ಈಗ ಎಲ್ಲರ ಮನೆ ಮಾತಾಗಿದೆ. ಜೊತೆಗೆ, ಹಲವು ಕಡೆ ತಲೈವಾ ಹುಟ್ಟುಹಬ್ಬವನ್ನು ಕೇಕ್ಗಳು, ಹೂ ಮಾಲೆಗಳು, ದೊಡ್ಡ ಪೋಸ್ಟರ್ಗಳು, ದೊಡ್ಡ ದೊಡ್ಡ ಬ್ಯಾನರ್ಗಳು, ಹಾಲಿನ ಅಭಿಷೇಕ ಮಾಡುವುದರ ಮೂಲಕ ಭರ್ಜರಿಯಾಗಿ ಆಚರಿಸಲಾಗುತ್ತಿದೆ.