More

    ಜೂನಿಯರ್​ ಎನ್​ಟಿಆರ್​​ ಧರಿಸಿರುವ ಈ ವಾಚ್​ನ​ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!

    ಹೈದರಾಬಾದ್​: ಬಾಹುಬಲಿ ಸಿನಿಮಾ ಖ್ಯಾತಿಯ ರಾಜಮೌಳಿ ನಿರ್ದೇಶನದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ “ಆರ್​ಆರ್​ಆರ್​” ಸಿನಿಮಾ ಬಿಡುಗಡೆ ಸಜ್ಜಾಗಿದೆ. ಜನವರಿ 7ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಚಿತ್ರತಂಡ ಭಾರೀ ಪ್ರಚಾರದಲ್ಲಿ ತೊಡಗಿಕೊಂಡಿದೆ. “ಆರ್​ಆರ್​ಆರ್​” ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಇಡೀ ಚಿತ್ರತಂಡ ದೇಶದ ಪ್ರಮುಖ ನಗರಗಳಿಗೆ ತೆರಳಿ ತಮ್ಮ ಚಿತ್ರದ ಪ್ರಚಾರವನ್ನು ಮಾಡುತ್ತಿದೆ.

    ಚಿತ್ರದ ನಾಯಕ ನಟರಾದ ರಾಮ್​ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಕೂಡ ನಿರ್ದೇಶಕ ರಾಜಮೌಳಿಗೆ ಸಾಥ್​ ನೀಡಿದ್ದಾರೆ. ಈಗಾಗಲೇ ಬೆಂಗಳೂರು, ಚೆನ್ನೈ ಮತ್ತು ಮುಂಬೈಗೆ ಚಿತ್ರತಂಡ ಭೇಟಿ ನೀಡಿ ತಮ್ಮ ಚಿತ್ರದ ಬಗ್ಗೆ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಸಿನಿಮಾ ಬಗ್ಗೆ ಸಾಕಷ್ಟು ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಆದರೆ, ಈಗ ನಾವು ಹೇಳ ಹೊರಟಿರುವ ವಿಷಯ ಸಿನಿಮಾ ಬಗ್ಗೆ ಅಲ್ಲ. ಯಾವುದರ ಬಗ್ಗೆ ಅಂದರೆ, ಜೂನಿಯರ್​ ಎನ್​ಟಿಆರ್​ ಅವರ ಕೈಗಡಿಯಾರದ ಬಗ್ಗೆ.

    ಹೌದು. ಜೂ. ಎನ್​ಟಿಆರ್ ಹೋದ ಕಡೆಯಲ್ಲೆಲ್ಲ ಅವರು ಧರಿಸಿರುವ ವಾಚ್​ ಎಲ್ಲರ ಗಮನ ಸೆಳೆಯುತ್ತಿದೆ. ದುಬಾರಿ ಕಾರು, ಬೈಕ್​ ಮಾತ್ರ ಎನ್​ಟಿಆರ್​ ಬಳಿಯಿಲ್ಲ, ಅದ್ಧೂರಿ ವಾಚ್​ ಸಂಗ್ರಹವೂ ಕೂಡ ಅವರ ಬಳಿಯಿದೆ ಎಂಬುದಕ್ಕೆ ಆರ್​ಆರ್​ಆರ್​ ಪ್ರೆಸ್​ಮೀಟ್​ನಲ್ಲಿ ಧರಿಸಿದ್ದ ವಾಚ್​ ಒಂದು ಉದಾಹರಣೆ ಆಗಿದೆ. ಎನ್​ಟಿಆರ್​ ಧರಿಸಿರುವ ವಾಚ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರ ಬೆಲೆ ತಿಳಿದುಕೊಳ್ಳಲು ನೆಟ್ಟಿಗರು ಎದುರು ನೋಡುತ್ತಿದ್ದಾರೆ.

    ಸೆಲೆಬ್ರಿಟಿಗಳು ದುಬಾರಿ ವಸ್ತುಗಳನ್ನು ಹೊಂದುವುದು ಸಾಮಾನ್ಯ ಸಂಗತಿ. ಆದರೆ, ಎನ್​ಟಿಆರ್​ ವಾಚ್​ನ ಬೆಲೆ ಕೇಳಿದ್ರೆ ಇವರು ಇಷ್ಟೊಂದು ಐಷಾರಾಮಿ ಜೀವನ ನಡೆಸುತ್ತಿದ್ದಾರಾ ಎಂದು ಹುಬ್ಬೇರಿಸದೇ ಇರಲಾರಿರಿ. ಏಕೆಂದರೆ, ಜೂ.ಎನ್​ಟಿಆರ್​ ಕೈಯಲ್ಲಿರುವ ವಾಚ್​ನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ.

    ವಾಚ್​ನ ಹೆಸರು ರಿಚಾರ್ಡ್​ ಮಿಲ್ಲೆ ಆರ್​ಎಂ011 ಕಾರ್ಬನ್​ ಎನ್​ಟಿಪಿಟಿ ಗ್ರೊಸ್​ಜೀನ್​ ರೋಸ್​ ಗೋಲ್ಡ್​ ಲೋಟಸ್​ ಎಫ್​ 1. ಇದು ಸೀಮಿತ ಆವೃತ್ತಿಯ ವಾಚ್​. ಇದರ ನಿಖರ ಬೆಲೆ 3 ಕೋಟಿ 99 ಲಕ್ಷದ 32 ಸಾವಿರದ 392 ರೂಪಾಯಿ. ವಿಶ್ವದಲ್ಲೇ ಅತ್ಯಂತ ದುಬಾರಿ ವಾಚ್​ಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಬೆಲೆ ತಿಳಿದುಕೊಂಡ ನೆಟ್ಟಿಗರ ತಲೆ ತಿರುಗುತ್ತಿದೆ. ಈ ವಾಚ್​ಗೆ ಇಷ್ಟೊಂದಾ ಎಂದು ಹುಬ್ಬೇರಿಸುತ್ತಿದ್ದಾರೆ. ಇನ್ನು ಎನ್​ಟಿಆರ್​ ಅವರ ಸಹೋದರ ಕಲ್ಯಾನ್​ ರಾಮ್​ ಕೂಡ ಈ ಹಿಂದೆ ಕೋಟಿ ಬೆಲೆ ಬಾಳುವ ವಾಚ್​ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಕಷ್ಟು ಬೆಲೆ ಬಾಳುವ ವಸ್ತುಗಳು ಜೂ. ಎನ್​ಟಿಆರ್​ ಬಳಿ ಇವೆ. (ಏಜೆನ್ಸೀಸ್​)

    ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!

    VIDEO: ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!

    ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ ಡಿಸೆಂಬರ್​ನಲ್ಲಿ 2ನೇ ಡೋಸ್​ ಕರೊನಾ ಲಸಿಕೆ: ಆಘಾತಕ್ಕೊಳಗಾದ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts