

ಹೈದರಾಬಾದ್: ಸೆಲೆಬ್ರಿಟಿಗಳದ್ದು ದುಬಾರಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ತುಂಬಾ ದುಬಾರಿಯಾಗಿರುತ್ತವೆ. ಒಮ್ಮೊಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೇವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.
ಜ್ಯೂನಿಯರ್ ಎನ್ಟಿಆರ್ ಸದ್ಯ ದೇವರ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿರುವುದು ಗೊತ್ತೇ ಇದೆ. ಈ ಸಿನಿಮಾವನ್ನು ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದ್ದು, ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಸಿನಿಮಾದ ಶೂಟಿಂಗ್ ಸಹ ಚುರುಕುಗೊಂಡಿದೆ. ನಿನ್ನೆ ಟಿಲ್ಲು ಸ್ಕ್ವೇರ್ ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಈ ಕಾರ್ಯಕ್ರಮಕ್ಕೆ ಜೂ. ಎನ್ಟಿಆರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಎನ್ಟಿಆರ್, ದೇವರ ಚಿತ್ರವು ನಿಮ್ಮೆಲ್ಲರ ಕಾಲರ್ ಎತ್ತುವಂತೆ ಮಾಡುತ್ತದೆ. ಸ್ವಲ್ಪ ತಡವಾದರೂ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು.
ಆದರೆ, ಈ ಸಮಾರಂಭದಲ್ಲಿ ತಾರಕ್ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ವಾಚ್ ಬೆಲೆ ಕೇಳಿ ಎಲ್ಲರೂ ದಂಗಾದರು. ತಾರಕ್ ಧರಿಸಿದ್ದ ವಾಚ್ 'ಒಡೋಮರ್ ಪಿಗೆಟ್ ರಾಯಲ್ ಓಕ್' ಬ್ರಾಂಡ್‌ಗೆ ಸೇರಿದೆ. ಇದರ ಬೆಲೆ 1,89,000 ಡಾಲರ್. ಅಂದರೆ, ಭಾರತೀಯ ಕರೆನ್ಸಿ ಪ್ರಕಾರ ಅಕ್ಷರಶಃ 1,57,32,455 ರೂಪಾಯಿ. ಈ ವಾಚ್ ವಿವಿಧ ಮಾಡೆಲ್ಗಳನ್ನು ಸಹ ಹೊಂದಿದೆ. ಮಾಡೆಲ್ಗಳನ್ನು ಅವಲಂಬಿಸಿ ಬೆಲೆಗಳು ಬದಲಾಗುತ್ತವೆ.
ಜೂ.ಎನ್ಟಿಆರ್ ಬಳಿ ಸ್ಪೋರ್ಟ್ಸ್ ವಾಚ್, ಕಸ್ಟಮೈಸ್ ಮಾಡಿದ ವಾಚ್ ಮತ್ತು ಹಲವು ರೀತಿಯ ವಾಚ್ ಸಂಗ್ರಹ ಲಭ್ಯವಿದೆ. ಎಂಟು ಕೋಟಿ ಮೌಲ್ಯದ ವಾಚ್ ಕೂಡ ತಾರಕ್ ಬಳಿ ಇದೆ. ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಾವು ಇಡೀ ಜೀವನ ದುಡಿದರು ಈ ವಾಚ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ. ಸದ್ಯ ವಾಚ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್)