

ಬೆಂಗಳೂರು: ರಮ್ಯಾ ನಿರ್ಮಾಣದ 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ಸಂಕಷ್ಟ ಎದುರಾಗಿರುವುದು ಗೊತ್ತೇ ಇದೆ. ಆ ಶೀರ್ಷಿಕೆಯನ್ನು ನೀಡಬಾರದು ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೊಟೀಸ್ ನೀಡಿದ್ದಾರೆ.
ಈ ಸಂಬಂಧ ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬಾಬು ಅವರು ತಮ್ಮ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಮೂಲಕ ನೊಟೀಸ್ ನೋಟೀಸ್ ನೀಡಿದ್ದಾರೆ. ಶೀರ್ಷಿಕೆ ನೀಡಿದರೆ ಕೃತಿ ಚೌರ್ಯವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಶೀರ್ಷಿಕೆಯು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಬಣ್ಣದ ಗೆಜ್ಜೆ' ಚಿತ್ರದ 'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಹಾಡಿನಿಂದ ಸ್ಫೂರ್ತಿಪಡೆದಿದೆ. ಅದೇ ಕಾರಣಕ್ಕೆ, ಆ ಶೀರ್ಷಿಕೆಯನ್ನು ಇಡುವುದಕ್ಕೆ ರಾಜೇಂದ್ರ ಸಿಂಗ್ ಬಾಬು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಾಬು, 'ಅದು ನನ್ನ ಸಿನಿಮಾ, ನನ್ನ ಹಾಡು, ಯಾರೂ ಬಳಸುವಂತಿಲ್ಲ. ಈ ವಿಷಯವಾಗಿ ಲಾಯರ್ ಹತ್ತಿರ ಮಾತಾಡಿ ಕರೆಕ್ಟ್ ಉತ್ತರ ಕೊಡ್ತೀನಿ. ಆ ಟೈಟಲ್ ಯಾರಿಗೂ ನೀಡಬಾರದು. ನೀಡಿದರೆ ಅದು ಕೃತಿಚೌರ್ಯವಾಗುತ್ತದೆ. ಈ ಕುರಿತು ಕೋರ್ಟ್ನಲ್ಲೇ ಉತ್ತರ ಕೊಡುತ್ತೀನಿ' ಎಂದು ಅವರು ಹೇಳಿದ್ದಾರೆ.