

ಬೆಂಗಳೂರು: 'ಬಿಂಗೋ' ಎಂಬ ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಚಿತ್ರದ ಮುಹೂರ್ತದಲ್ಲೇ ಅವರು ಭಾಗವಹಿಸಿ, ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದರು. ಈಗ ಕೊನೆಗೂ ಚಿತ್ರತಂಡಕ್ಕೆ ಅವರ ಎಂಟ್ರಿಯಾಗಿದೆ.
ಇದನ್ನೂ ಓದಿ: ‘ಅಥಿ ಐ ಲವ್ ಯು’ ಚಿತ್ರಕ್ಕೆ 11 ನಿಮಿಷಗಳ ಒಂದೇ ಶಾಟ್!
ಈ ಹಿಂದೆ 'ಶಂಭೋ ಶಿವ ಶಂಕರ' ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಈಗ 'ಬಿಂಗೋ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಈಗ ಮೂರನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ ಹಾಗೂ ಇನ್ನಿತರರು ಅಭಿನಯಿಸುತ್ತಿರುವ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.
ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎರಡು ಶೇಡ್ಗಳಲ್ಲಿ ಅವರ ಪಾತ್ರವಿರುತ್ತದೆ ಎಂದು ಹೇಳಲಾಗುತ್ತಿದೆ. ರಾಗಿಣಿ ಜತೆಗೆ ಆರ್.ಕೆ. ಚಂದನ್, ರಕ್ಷಾ ನಿಂಬರ್ಗಿ, ರಾಜೇಶ್ ನಟರಂಗ, 'ಮಜಾ ಟಾಕೀಸ್' ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್ ಮುಂತಾದವರು ಅಭಿನಯಿಸುತ್ತಿದ್ದಾರೆ.
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಹಿತನ್ ಹಾಸನ್ ಸಂಗೀತ ಮತ್ತು ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿದೆ.