ದಿನಪತ್ರಿಕೆಯಿಂದ ಮೈ ಮುಚ್ಚಿಕೊಂಡ ವಿದ್ಯಾ ಬಾಲನ್ ; ಹಾಟ್​ ಫೋಟೋಶೂಟ್

Vidya Balan
Published on

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೆ ಸೀರೆ ಎಂದರೆ ಸಖತ್​ ಇಷ್ಟ ಎಂದು ಹಲವು ಕಾರ್ಯಕ್ರಮ ಹಾಗೂ ಸಂದಶರ್ನಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದೀಗ ನ್ಯೂಸ್ ಪೇಪರ್​​ನಿಂದ ದೇಹವನ್ನು ಮುಚ್ಚಿಕೊಂಡು ಹಾಟ್​​ ಫೋಟೋಶೂಟ್​​ ಮಾಡಿಸಿದ್ದಾರೆ.

ಒಂದು ಕೈಯಿಂದ ನ್ಯೂಸ್ ಪೇಪರ್ ಹಿಡಿದು ದೇಹವನ್ನು ಮುಚ್ಚಿಕೊಂಡು, ಮತ್ತೊಂದು ಕೈಲಿ ಮಗ್ ಹಿಡಿದಿರುವ ವಿದ್ಯಾ ಬಾಲನ್ ಸಖತ್​ ಹಾಟ್​​ ಆಗಿ ಕಾಣಿಸಿಕೊಂಡಿದ್ದಾರೆ. ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಯಾಕೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೂ, ಈ ಫೋಟೋ ಸೆರೆ ಹಿಡಿದವರ ಹೆಸರನ್ನು ಹಾಕಿದ್ದಾರೆ. ಹಾಗಾಗಿ ಇದು ಕ್ಯಾಲೆಂಡರ್ ಗಾಗಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಲಾಗುತ್ತಿದೆ.

ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ, ನಟಿ ವಿದ್ಯಾ ಬಾಲನ್ ಅವರ ಫೋಟೋಶೂಟ್ ಮಾಡಿದ್ದು, ವಿದ್ಯಾ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್​ ಸೌಂದರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net