‘4 ಎನ್ 6’ ಚಿತ್ರಕ್ಕೆ ಕುಂಬಳಕಾಯಿ; ಮರ್ಡರ್ ಮಿಸ್ಟ್ರಿ ರಹಸ್ಯ ಬಿಡಿಸಲು ರಚನಾ ಇಂದರ್ ರೆಡಿ

rachana inder
Published on

ಬೆಂಗಳೂರು: ರಚನಾ ಇಂದರ್ ಹಾಗೂ ನವೀನ್ ಕುಮಾರ್ ಅಭಿನಯದ ಹೊಸ ಚಿತ್ರ ‘4 ಎನ್ 6’. ದರ್ಶನ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಒಂದು ಕೊಲೆಯ ತನಿಖೆಯ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.

ಇದೇ ಮೊದಲ ಬಾರಿಗೆ ರಚನಾ ಇಂದರ್ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ 30 ದಿನಗಳ ಕಾಲ ಶೂಟಿಂಗ್ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ. ಮುಂದಿನ ತಿಂಗಳು ಸಿನಿಮಾ ಟೀಸರ್ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

ಇನ್ನು ಈ ಚಿತ್ರದ ನಿರ್ದೇಶಕ ದರ್ಶನ್ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದು, ಅವರಿಗೆ ಮುತ್ತುರಾಜ್ ಸಾಥ್ ನೀಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಚರಣ್ ತೇಜ್ ಛಾಯಾಗ್ರಹಣ, ಸತ್ಯಕಿ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಸಂಗೀತ ಇರಲಿದೆ. ರಚನಾ ಹಾಗೂ ನವೀನ್ ಜತೆ ಭವಾನಿ ಪ್ರಕಾಶ್, ಮೇಘನಾ, ಸಂಜಯ್, ಸೌರವ್, ಸತ್ಯ, ರೇಣುಕಾ ಮುಖ್ಯ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net