ತಮಿಳುನಾಡಿನ ರೆಸಾರ್ಟ್​ನಲ್ಲಿ ಉಪ್ಪಿ ದಂಪತಿಯ 18ನೇ ವಿವಾಹ ವಾರ್ಷಿಕೋತ್ಸವ ; ಫೋಟೋ ವೈರಲ್

Published on
ಒಂದೇ ಮನೆಯಲ್ಲಿ ಇಬ್ಬರು ಸಿನಿಮಾ ನಟರು ಇದ್ದರೆ, ಆ ಇಬ್ಬರು ಕೆಲಸದಿಂದ, ಶೂಟಿಂಗ್ ನಿಂದ ವಿರಾಮ ಪಡೆದು ಒಟ್ಟಿಗೆ ಕಾಲ ಕಳೆಯುವುದು ತುಂಬಾನೆ ಕಷ್ಟದ ಸಂಗತಿ. ಆದರೆ, ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕಾ ತಮ್ಮ 18 ನೇ ವಿವಾಹ ವಾರ್ಷಿಕೊತ್ಸವದ ಸಂದರ್ಭದಲ್ಲಿ ತಮ್ಮ ಬ್ಯೂಸಿ ವೇಳಾಪಟ್ಟಿ ಇಂದ ಕೊಂಚ ವಿರಾಮ ಪಡೆದು ತಮಿಳುನಾಡು ಪ್ರವಾಸಕ್ಕೆ ಹೋಗಿದ್ದರು. ಉಪ್ಪಿ ಮತ್ತು ಪ್ರಿಯಾಂಕಾ ಅವರು ತಮಿಳುನಾಡಿನ, ನೀಲಗಿರಿ ಜಿಲ್ಲೆಯಲ್ಲಿರುವ ವೈಲ್ಡ್ ಪ್ಲಾನೆಟ್ ರೆಸಾರ್ಟ್​​ನಲ್ಲಿ ತಂಗಿದ್ದು ಬಹಳಷ್ಟು ಎಂಜಾಯ್ ಮಾಡಿದ್ದಾರೆ.
ಈ ವೈಲ್ಡ್ ಪ್ಲಾನೆಟ್ ರೆಸಾರ್ಟ್ ತಮಿಳುನಾಡು-ಕೇರಳ ಗಡಿಯಲ್ಲಿ ಇದೆ. ಸ್ಟಾರ್ ದಂಪತಿ ರೆಸಾರ್ಟ್​​ನಲ್ಲಿ ಒಂದಿಷ್ಟು ಪ್ರಕೃತಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಶ್ರಾಂತಿ ಪಡೆದಿದ್ದಾರೆ. ಒಂದೊಳ್ಳೆ ಡಿನ್ನರ್, ರೇಸಿಂಗ್, ಜಿಪ್ಲೈನ್, ಫೈರ್ ಕ್ಯಾಂಪ್ ಅಂತ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ. ಪ್ರಿಯಾಂಕಾ ತಮ್ಮ ಸೋದರ ಮಾವ ಸುಧಿ ಮತ್ತು ಅವರ ಪತ್ನಿ ವೀಣಾ ಅವರೊಂದಿಗೆ ತಮಿಳುನಾಡಿಗೆ ಹೋಗಿದ್ದು, ತುಂಬಾನೆ ಖುಷಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮೊಂದಿಗೆ ಉಪ್ಪಿ ಅವರು ಕೂಡ ತುಂಬಾ ಮಜಾ ಮಾಡಿದ್ದಾರೆಂದು ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ. 
ರೆಸಾರ್ಟ್​​ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿರುವ ಒಂದಿಷ್ಟು ಫೋಟೋಗಳನ್ನು ಸಹ ಪ್ರಿಯಾಂಕಾ ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಉಪ್ಪಿ ಮತ್ತು ಪ್ರಿಯಾಂಕಾ ಅವರು ಡಿ.14.2003ರಲ್ಲಿ ಮದುವೆಯಾಗಿದ್ದು, ಕಳೆದ ಡಿ.14.2021ಕ್ಕೆ 18 ವರ್ಷಗಳು ಕಳೆದಿವೆ. ಈ ಖುಷಿಯಲ್ಲಿ ಪ್ರವಾಸದ ಸಮಯದಲ್ಲಿ ಕೇಕ್ ಸಹ ಕತ್ತರಿಸಿದ್ದಾರೆ ಈ ದಂಪತಿ. ಇದೀಗ, ನಟಿ ಶೇರ್ ಮಾಡಿರುವ 50ಕ್ಕೂ ಹೆಚ್ಚು ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net