'ದಳಪತಿ 66' ತಮಿಳು-ತೆಲುಗು ದ್ವಿಭಾಷಾ ಚಿತ್ರವಾಗಿದೆ. ಹಾಗಾಗಿ, ರಶ್ಮಿಕಾ ಅವರು ಎರಡೂ ಭಾಷೆಗಳಲ್ಲಿ ಪ್ರಸಿದ್ಧ ನಟಿಯಾಗಿರುವುದರಿಂದ ವಿಜಯ್‌ಗೆ ಜೋಡಿಯಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಈಗಾಗಲೇ, ನಟಿಯೊಂದಿಗೆ ಮಾತುಕತೆಗಳು ನಡೆಯುತ್ತಿದ್ದು, ರಶ್ಮಿಕಾ ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಥಮನ್ ಅವರು 'ದಳಪತಿ 66' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 'ದಳಪತಿ 66' ಚಿತ್ರದಲ್ಲಿ ನಟಿಸಿದರೆ ಅದು ತಮಿಳಿನಲ್ಲಿ ನಟಿ ರಶ್ಮಿಕಾ ಅವರ ಎರಡನೇ ಸಿನಿಮಾ ಆಗಲಿದೆ. ಇದಲ್ಲದೇ, ನ್ಯಾಷನಲ್ ಕ್ರಶ್ಗೆ ಹಿಂದಿಯಲ್ಲೂ, ತೆಲುಗಿನಲ್ಲೂ ಸಾಲು ಸಾಲು ಸಿನಿಮಾಗಳ ಆಫರ್ಗಳು ಲಭಿಸುತ್ತಿವೆ.