ಹೌದು, ಆಂಧ್ರದ ನೆಲ್ಲೂರಿನ ಸಮೀಪದ ಸುಲ್ಲೂರುಪೇಟದಲ್ಲಿ 'ವಿ ಎಪಿಕ್' ಹೆಸರಿನ ಅತಿದೊಡ್ಡ ಮೂರು ಸ್ಕ್ರೀನ್ ಚಿತ್ರಮಂದರಿವೊಂದನ್ನು 2 ವರ್ಷಗಳ ಹಿಂದೆ 2019ರಲ್ಲಿ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಥಿಯೇಟರ್ ಚೆನ್ನಾಗಿ ನಡೆಯುತ್ತಿತು. ಆದರೆ, ಈಗ ಟಿಕೆಟ್ಗಳ ದರ ತೀರ ಕಡಿಮೆ ಆಗಿದ್ದು, ಯಾವುದೇ ಲಾಭವಿಲ್ಲದರ ಜೊತೆ ನಷ್ಟವನ್ನು ಎದುರಿಸುತ್ತಿರುವ ಕಾರಣ ಡಿ.25 ರಿಂದ ಚಿತ್ರಗಳ ಪ್ರದರ್ಶನ ನಿಲ್ಲಿಸಿದೆ. 'ವಿ ಎಪಿಕ್' ಥಿಯೇಟರ್ 106 ಅಡಿ ಅಗಲದ ಪರದೆಯನ್ನು ಹೊಂದಿರುವ ದೇಶದ, ಏಷ್ಯಾದ ಮೊದಲನೇ ಚಿತ್ರಮಂದಿರವಾಗಿದ್ದು, ಇದು ವಿಶ್ವದ ಮೂರನೇ ಅತಿದೊಡ್ಡ ಪರದೆಯಾಗಿದೆ ಎನ್ನಲಾಗಿದೆ. 676 ಆಸನಗಳ ಸಾಮರ್ಥ್ಯದ ಥಿಯೇಟರ್, ತಲಾ 140 ಆಸನಗಳ 3 ಸ್ಕ್ರೀನ್ಗಳನ್ನು ಹೊಂದಿದೆ.