ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪವರ್ ಸ್ಟಾರ್; ಅಭಿಮಾನಿಗಳ ಜತೆ ಪವನ್ ಕಲ್ಯಾಣ್ ಸೆಲ್ಫಿ!

Published on
ದಕ್ಷಿಣ ಕನ್ನಡ: ಟಾಲಿವುಡ್​ನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’ ಸಿನಿಮಾ ಫೆಬ್ರವರಿ 25 ರಂದು ರಿಲೀಸ್ ಆಗಿ ಹಿಟ್ ಆಗಿದೆ. ಈ ಸಿನಿಮಾ ಈಗ ಒಟಿಟಿಯಲ್ಲೂ ಪ್ರಸಾರವಾಗುತ್ತಿದ್ದು ವೀಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಈ ಯಶಸ್ಸಿನಲ್ಲಿ ತೆಲುತ್ತಿರುವ ನಟ ಪವನ್ ಕಲ್ಯಾಣ್ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೊದಲು ಅವರ ಸಂಕಲ್ಪ ನೆರವೇರಿಸಿ ನಂತರ ಆಶ್ಲೇಷ ಬಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ದೇವರ ದರ್ಶನ ಪಡೆದರು.
ಇನ್ನು, ಆಡಳಿತ ಮಂಡಳಿಯಿಂದ ನಟನಿಗೆ ವಿಶೇಷ ಸನ್ಮಾನದ ಜತೆಗೆ ದೇವಸ್ಥಾನದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ನಟ ಪವನ್ ಕಲ್ಯಾಣ್ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ದೇವಸ್ಥಾನದ ಬಳಿ ನೆರೆದಿದ್ದರು. ದೇವಸ್ಥಾನದಲ್ಲಿ ನಟ ಪವನ್ ಕಲ್ಯಾಣ್ ಅವರನ್ನು ಕಂಡ ಭಕ್ತರು ಅವರ ಸುತ್ತ ಸೇರಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳಿಗೆ ನಿರಾಸೆಯಾಗದಂತೆ ಸೆಲ್ಪಿಗೆ ಪವನ್‌ ಕಲ್ಯಾಣ್ ಪೋಸ್ ಕೊಟ್ಟಿದ್ದು ಅವರ ಸರಳತೆಗೆ ಸಾಕ್ಷಿಯಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net