ಹೆತ್ತ ತಾಯಿ, ಹೆಂಡತಿಗೂ ಇಷ್ಟವಾಗಲಿಲ್ಲ ಪಾತಾಳ್​ ಲೋಕದ ಹತೋಡಾ ತ್ಯಾಗಿ ಪಾತ್ರ!

tyagi
Published on

ಹತೋಡಾ ತ್ಯಾಗಿ ಎಂದ ತಕ್ಷಣ ಥಟ್​ ಎಂದು ‘ಪಾತಾಳ್​ ಲೋಕ್​’ ವೆಬ್​ಸರಣಿ ನೆನಪಿಗೆ ಬರುತ್ತದೆ. ಅದರಲ್ಲಿನ ಆ ಪಾತ್ರದ ಕ್ರೌರ್ಯ ಭಯ ಹುಟ್ಟಿಸುತ್ತದೆ. ಮೃದು ಹೃದಯದವರಂತೂ ತ್ಯಾಗಿಯ ವರ್ತನೆ ನೋಡಿ ಗಾಬರಿಗೊಂಡಿದ್ದೇ ಹೆಚ್ಚು. ಮತ್ತೊಂದೆಡೆ ತೆರೆಮೇಲೆ ಆ ಪಾತ್ರಕ್ಕೆ ಜೀವ ತುಂಬಿದ ಅಭಿಷೇಕ್​ ಬ್ಯಾನರ್ಜಿ ಸದ್ಯ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಪ್ರಶಂಸೆಗಳ ಸುರಿಮಳೆಯೇ ಸುರಿಯುತ್ತಿದೆ. ಇಷ್ಟೆಲ್ಲ ಖುಷಿಯ ಸಂಗತಿಗಳ ನಡುವೆ ಬೇಸರದ ಸಂಗತಿಯೂ ಅವರನ್ನು ಕಾಡುತ್ತಿದೆ. ಅದೇನೆಂದರೆ, ಎಲ್ಲರಿಂದ ಮೆಚ್ಚುಗೆ ಪಡೆದ ಪಾತಾಳ್​ ಲೋಕ್​ ವೆಬ್​ ಸರಣಿಯನ್ನು ಅವರ ಮನೆಯವರೇ ನೋಡಲು ನಿರಾಕರಿಸಿದ್ದಾರೆ!

ಹೌದು, ಸರಣಿಯಲ್ಲಿ ಸುತ್ತಿಗೆಯಿಂದಲೇ 45 ಕೊಲೆ ಮಾಡಿದ ಕೊಲೆಗಾರನಾಗಿ ಅಭಿಷೇಕ್​ ಪಾತ್ರ ಮಾಡಿದ್ದಾರೆ. ಗಂಭೀರ ಸ್ವರೂಪದ ಆ ಪಾತ್ರ ಇಡೀ ಸರಣಿಯ ಹೈಲೈಟ್​ಗಳಲ್ಲೊಂದು. ಆ ಒಂದು ಕಾರಣಕ್ಕೆ ಪಾತಾಳ್​ ಲೋಕ್​ ಸರಣಿಯನ್ನು ಅಭಿಷೇಕ್​ ಬ್ಯಾನರ್ಜಿಯ ತಾಯಿ ಮತ್ತು ಹೆಂಡತಿ ನೋಡಲು ಮನಸು ಮಾಡಿಲ್ಲ.

‘ಇದೇ ನನ್ನ ಪಾಲಿನ ಬಹುದೊಡ್ಡ ಮೆಚ್ಚುಗೆ’ ಎಂದಿರುವ ಅಭಿಷೇಕ್​, ‘ನನ್ನ ಜೀವನದಲ್ಲೇ ನಾನು ಇಂಥ ಪಾತ್ರ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಕಾಮಿಡಿ ರೀತಿಯ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದೇನೆ. ಮುಂದಿನ ಮೂರು ಸಿನಿಮಾಗಳಲ್ಲಿಯೂ ಕಾಮಿಡಿ ಪಾತ್ರವೇ. ಇದೀಗ ವಿಶಾಲ್​ ತ್ಯಾಗಿ ಪಾತ್ರ ಮಾಡಿದ್ದೇನೆ. ಅದರಿಂದ ತುಂಬ ಕಲಿಯಲು ಸಿಕ್ಕಿತು’ ಎನ್ನುತ್ತಾರೆ ಅಭಿಷೇಕ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net