ಸಣ್ಣ ತಪ್ಪು ಮಾಡಿದ್ರು ಚೇತನ್​ ಚಂದ್ರ ... ಏನದು?

Shardula - Final
Published on

ಬೆಂಗಳೂರು: ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಬ್ಯಾನರ್​ನಲ್ಲಿ ಮೂಡಿಬಂದಿರುವ 'ಶಾರ್ದೂಲ' ಚಿತ್ರವು ಆಗಸ್ಟ್​ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೀಗ ಆ ಚಿತ್ರಕ್ಕೆ ಸಂಚಿತ್​ ಹೆಗ್ಡೆ ಹಾಡಿರುವ ಒಂದು ಲಿರಿಕಲ್​ ವಿಡಿಯೋ ಬಿಡುಗಡೆಯಾಗಿ ಜನಪ್ರಿಯವಾಗಿದೆ.

ತಮ್ಮ ವಿಭಿನ್ನ ಶೈಲಿಯ ಕಂಠಸಿರಿಯಿಂದ ಕೇಳುಗರ ಮನಗೆದ್ದಿರುವ ಸಂಚಿತ್ ಹೆಗಡೆ ಅವರ ಗಾಯನದಲ್ಲಿ ಮೂಡಿಬಂದಿರುವ 'ಒಂದು ಸಣ್ಣ ತಪ್ಪನ್ನು ಮಾಡಿ ಬಿಡಲೇ ನಾನು ...' ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ಬರೆದಿರುವ ಈ ಹಾಡಿಗೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ.

ಈ ಹಿಂದೆ 'ನಮ್​ ಏರಿಯಲ್ಲೊಂದು‌ ದಿನ', 'ತುಘಲಕ್' ಹಾಗೂ 'ಹುಲಿರಾಯ' ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್, ಈಗ 'ಶಾರ್ದೂಲ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ 'ದೆವ್ವ ಇರಬಹುದಾ?' ಎಂಬ ಅಡಿಬರಹ ಇರುವುದು ವಿಶೇಷ.

ಚೇತನ್ ಚಂದ್ರ, ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ನಟಿಸಿರುವ ಈ ಚಿತ್ರವು ಮುಕ್ತಾಯವಾಗಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ.

Ondu

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net