ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ 'ಚಿ.ತು.ಸಂಘ'

Chi Thu Sangha - Final
Published on

ಬೆಂಗಳೂರು: ಶರಣ್-ಚಿಕ್ಕಣ್ಣ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ 'ಅಧ್ಯಕ್ಷ' ಚಿತ್ರದಲ್ಲಿ ಅವರಿಬ್ಬರೂ ಚಿ.ತು. ಸಂಘ (ಚಿಂತೆಯಿಲ್ಲದ ತುಂಡೈಕ್ಳ ಸಂಘ) ಎಂಬ ಸಂಘಟನೆ ಸ್ಥಾಪಿಸಿ, ಅದಕ್ಕೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಏನೆಲ್ಲ ಅವಾಂತರಗಳನ್ನು ಮಾಡುತ್ತಾರೆ ಎಂಬುದು ಆ ಚಿತ್ರವನ್ನು ನೋಡಿದವರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಈಗ್ಯಾಕೆ ಈ ವಿಷಯ ಎಂದರೆ, 'ಚಿ.ತು.ಸಂಘ' ಎಂಬ ಹೆಸರಲ್ಲಿ ಸದ್ದಿಲ್ಲದೆ ಚಿತ್ರವೊಂದು ಬಿಡುಡೆಯಾಗುವುದಕ್ಕೆ ಸಜ್ಜಾಗಿದೆ. 'ಸುಳ್ಳೇ ನಮ್ಮನೆ ದೇವ್ರು' ಎಂಬ ಅಡಿಬರಹ ಇರುವ ಈ ಚಿತ್ರವನ್ನು ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್​ ಮಂಡಳಿಯು ವೀಕ್ಷಿಸಿ, 'ಯು/ಎ' ಪ್ರಮಾಣ ಪತ್ರವನ್ನು ನೀಡಿದೆ. ಪ್ರಮಾಣಪತ್ರ ಪಡೆದಿರುವ ಚಿತ್ರತಂಡವು, ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.

'ಚಿ.ತು.ಸಂಘ' ಚಿತ್ರವನ್ನು ಚೇತನ್​ ಕುಮಾರ್​ ನಿರ್ದೇಶಿಸಿದ್ದು, ಅವರೇ ಕಥೆ-ಚಿತ್ರಕಥೆ-ಸಂಭಾಷಣೆಗಳು ಬರೆದಿದ್ದಾರೆ. ಚಿತ್ರದಲ್ಲಿ ಅವರಋ ನಾಯಕನಾಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ರೂಪಾ ಕಾಣಿಸಿಕೊಂಡಿದ್ದಾರೆ.

ಶಿವಣ್ಣ ನಂದಿಹಳ್ಳಿ, ಲಕ್ಷ್ಮೀಕಾಂತಯ್ಯ ಮತ್ತು ಪಾರ್ವತಿ ಹೊಳೆನರಸೀಪುರ ನಿರ್ಮಿಸಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net