ಬೆಂಗಳೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ನಾಲ್ಕು ತಿಂಗಳು ಕಳೆದಿವೆ. ಆದರೆ, ಅವರಿಗೆ ರಾಜ್ಯಾದ್ಯಂತ ಸಿಗುತ್ತಿರುವ ಗೌರವ ಮಾತ್ರ ಇಂದಿಗೂ ಇಂದು ಚೂರು ಕಡಿಮೆಯಾಗುತ್ತಿಲ್ಲ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ, ಅಪ್ಪು ಅವರು ಸಾಕಷ್ಟು ಕಂಪನಿಗಳು, ಸರ್ಕಾರದ ಸಂಸ್ಥೆಗಳಿಗೆ ಸಹ ರಾಯಭಾರಿ ಆಗಿದ್ದರು. ಅದರಲ್ಲಿ, ಕರ್ನಾಟಕ ಹಾಲು ಒಕ್ಕೂಟ ಕೂಡಾ ಒಂದು. ಇದೀಗ, ಕೆಎಂಎಫ್ ಕೂಡಾ ನಟ ಪುನೀತ್ಗೆ ‘ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ’ ಘೋಷಿಸಿದೆ.