ಅಂದಹಾಗೆ, ಈ ಮೊದಲು ‘ಅಮೃತಧಾರೆ’ ಎಂಬ ಸಿನಿಮಾದಲ್ಲಿ ನಟ ಅಮಿತಾಭ್ ನಟಿಸಿದರೂ ಅದು ಕೇವಲ ಒಂದು ಅತಿಥಿ ಪಾತ್ರದಲ್ಲಾಗಿತ್ತು. ಹಾಗೆಯೇ, ಇದಾದ ಬಳಿಕ ಬಿಗ್ಬಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಅವರ ಜೀವನ ಚರಿತ್ರೆಯನ್ನು ಕುರಿತು ಒಂದು ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಜತೆಗೆ, ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದ್ದು, ಇದರ ಸಾರಥ್ಯ ಡಾ. ಹಂಸಲೇಖ ಅವರ ನಿರ್ವಹಿಸಿಕೊಂಡಿದ್ದಾರೆ.