ಮುಕ್ತಾಯ ಹಂತ ತಲುಪಿದ 'ಬಿಗ್​ ಬಾಸ್​' ಶಶಿ ಅಭಿನಯದ 'ಮೆಹಬೂಬ' ...

Mehbooba - Final
Published on

ಬೆಂಗಳೂರು: 'ಬಿಗ್ ಬಾಸ್' ಖ್ಯಾತಿಯ ಶಶಿಕುಮಾರ್​ ನಾಯಕನಾಗಿ ನಟಿಸಿರುವ 'ಮೆಹಬೂಬ' ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಈ ಮಧ್ಯೆ, ರಘುಶಾಸ್ತ್ರಿ ಬರೆದಿರುವ 'ದೇವರು ದೇವರು' ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಹಾಡನ್ನು 'ಸರಿಗಮಪ' ಖ್ಯಾತಿಯ ಮನೋಜವಂ ಆತ್ರೇಯ ಹಾಡಿದ್ದು, ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಕಂದ ಎಂಟರ್ ಟೈನ್​ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ.

ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್ (ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿ ರಾಜು ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಮ್ಯಾಥ್ಯೂಸ್‌ ಮನು ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net