More

    ಜೀ5 ಒಟಿಟಿಯಲ್ಲಿ ಹೊಸ ದಾಖಲೆ ಬರೆದ ವಿಕ್ರಾಂತ್​ ರೋಣ: ಒಂದೇ ದಿನದಲ್ಲಿ 50 ಕೋಟಿ ನಿಮಿಷಗಳ ವೀಕ್ಷಣೆ

    ಬೆಂಗಳೂರು: ಕಳೆದ ಜುಲೈ 28ರಂದು ಪಂಚ ಭಾಷೆಗಳಲ್ಲಿ ತೆರೆಗೆ ಬಂದಿತ್ತು ಪ್ಯಾನ್​ ಇಂಡಿಯಾ ಚಿತ್ರ “ವಿಕ್ರಾಂತ್​ ರೋಣ’. ಕಿಚ್ಚ ಸುದೀಪ್​ ಅಭಿನಯದ, ಅನೂಪ್​ ಭಂಡಾರಿ ನಿರ್ದೇಶನದ ಈ ಫ್ಯಾಂಟಸಿ ಲೋಕವನ್ನು ಥ್ರೀಡಿಯಲ್ಲಿ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ವಿಕ್ರಾಂತ್​ ರೋಣ 200 ಕೋಟಿ ರೂಪಾಯಿಗು ಅಧಿಕ ಗಳಿಕೆ ಮಾಡಿದ್ದು, ಇದೀಗ ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಬಿಡುಗಡೆಯಾಗಿರುವ ವಿಕ್ರಾಂತ್​ ರೋಣ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ.

    ಹೌದು, ಇದೇ ಸೆ. 2ರಂದು ಜೀ 5 ಕನ್ನಡ ಓಟಿಟಿಯಲ್ಲಿ “ವಿಕ್ರಾಂತ್​ ರೋಣ’ ಚಿತ್ರ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್​ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ಉಡುಗೊರೆಯಾಗಿ ಅಂದೇ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಕೇವಲ 24 ಗಂಟೆಯಲ್ಲೇ 500 ಮಿಲಿಯನ್​ (50 ಕೋಟಿ) ನಿಮಿಷಗಳ ವೀಕ್ಷಣೆಯ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸವನ್ನು ವಿಕ್ರಾಂತ್​ ರೋಣ ಸಿನಿಮಾ ನಿರ್ಮಿಸಿದೆ.

    ಜೀ5ನಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ ಭಜರಂಗಿ-2 ಸಿನಿಮಾ ಮೂರು ದಿನಗಳಲ್ಲಿ 5 ಕೋಟಿ ಮತ್ತು ಗರುಡ ಗಮನ ವೃಷಭ ವಾಹನ ಸಿನಿಮಾ 3 ದಿನಗಳಲ್ಲಿ 8 ಕೋಟಿ ಮಿನಟ್ಸ್​ ವೀಕ್ಷಣೆ ಪಡೆದುಕೊಂಡಿತ್ತು. ಆದರೆ, ವಿಕ್ರಾಂತ್​ ರೋಣ ಸಿನಿಮಾ ಒಂದೇ ದಿನದಲ್ಲಿ 50 ಕೋಟಿಗೂ ಅಧಿಕ ಮಿನಟ್ಸ್​ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆಯನ್ನೇ ಬರೆದಿದೆ. ಈ ವಿಚಾರವನ್ನು ಜೀ5 ತನ್ನ ಅಧಿಕೃತ ಟ್ವಿಟರ್​ನಲ್ಲೇ ಘೋಷಿಸಿದೆ.

    ಒಟಿಟಿಯಲ್ಲೂ ವಿಕ್ರಾಂತ್​ ರೋಣ ಅಬ್ಬರ ನೋಡಿ ಚಿತ್ರತಂಡ ತುಂಬಾ ಖುಷಿಯಾಗಿದೆ. ಅಲ್ಲದೆ, ಅಭಿಮಾನಿಗಳು ಕೂಡ ಇದನ್ನು ಟ್ವಿಟರ್​ನಲ್ಲಿ ಸಂಭ್ರಮ ಮಾಡುತ್ತಿದೆ. ಸದ್ಯಕ್ಕೆ ಕನ್ನಡ ಅವತರಿಣಿಕೆ ಮಾತ್ರ ಬಿಡುಗಡೆ ಆಗಿದ್ದು, ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಯಾವಾಗ? ಓಟಿಟಿ ಯಾವುದು? ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

    VIDEO| ಡಾನ್ಸ್​ ಮಾಡುತ್ತಲೇ ಪುಟ್ಟ ಬಾಲಕನ ಮೇಲೆ ಬಿದ್ದ ದಡೂತಿ ಮಹಿಳೆ! ಮುಂದೇನಾಯ್ತು ನೀವೇ ನೋಡಿ…

    ನಾನೇನು ಅವಳಿಗೆ ರೇಪ್​ ಮಾಡಿದೀನಾ? ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಅರವಿಂದ ಲಿಂಬಾವಳಿ

    ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts