ಪ್ಯಾನ್ ಇಂಡಿಯಾ ಮೇಘಾ ಶೆಟ್ಟಿ; ‘ಆಪರೇಷನ್ ಲಂಡನ್ ಕೆಫೆ’ ಶೂಟಿಂಗ್ ಕಂಪ್ಲೀಟ್

ಮೇಘಾ ಶೆಟ್ಟಿ
Published on

ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟಿರುವ ನಟಿ ಮೇಘಾ ಶೆಟ್ಟಿ ಈಗಾಗಲೇ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಮಿಂಚಿದ್ದು, ಇದೀಗ ಪ್ಯಾನ್ ಇಂಡಿಯಾ ಹಾರಲು ರೆಡಿಯಾಗಿದ್ದಾರೆ.

ಸಡಗರ ರಾಘವೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ್ಯಕ್ಷನ್ ಜಾನರ್‌ನ ಸಿನಿಮಾ ‘ಆಪರೇಷನ್ ಲಂಡನ್ ಕೆಫೆ'. ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ ಹಾಗು ಇವರಿಗೆ ಜೋಡಿಯಾಗಿ ‘ಜಿಲ್ಕಾ’ ಖ್ಯಾತಿಯ ನಾಯಕ ನಟ ಕವೀಶ್ ಶೆಟ್ಟಿ ನಾಯಕರಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಹಾಗೂ ಮರಾಠಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ ‘ಆಪರೇಷನ್ ಲಂಡನ್ ಕೆಫೆ’. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.

ಇನ್ನು ಈ ಚಿತ್ರದಲ್ಲಿ ಮರಾಠಿ ಕಲಾವಿದರಾದ ಶಿವಾನಿ ಸುರ್ವೆ ಹಾಗೂ ವಿರಾಟ್ ಮಡಕೆ ನಟಿಸುತ್ತಿರುವುದು ವಿಶೇಷ. ಜತೆಗೆ ಅರ್ಜುನ್ ಕಾಪಿಕ್ಕಾಡ್, ಸುರೇಶ್ ಕೂಡ ಪ್ರಮುಖ ತಾರಾಬಳಗದಲ್ಲಿದ್ದಾರೆ. ಮಾಸ್ ಮಾದ ಸಾಹಸ ನಿರ್ದೇಶನ, ಡಿ. ನಾಗಾರ್ಜುನ್ ಛಾಯಾಗ್ರಹಣ, ಪ್ರಾನ್ಶು ಝಾ ಸಂಗೀತ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net