More

    ಶೀಲ ಚಿತ್ರದ ವಿಮರ್ಶೆ: ನೋವುಗಳನ್ನು ಮೆಟ್ಟಿ ನಿಲ್ಲುವ ಹೆಣ್ಣಿನ ಅಳಲು

    ಚಿತ್ರ: ಶೀಲ
    ನಿರ್ದೇಶನ: ಬಾಲು ನಾರಾಯಣ್
    ನಿರ್ಮಾಣ: ಡಿ.ಎಮ್. ಪಿಳ್ಳೈ
    ತಾರಾಗಣ: ರಾಗಿಣಿ ದ್ವಿವೇದಿ, ರಿಯಾಜ್ ಖಾನ್, ಅವಿನಾಶ್, ಸುನೀಲ್ ಸುಗದ, ಚಿತ್ರಾ, ಶೋಭರಾಜ್ ಮುಂತಾದವರು

    ಹಣ ಎನ್ನುವಂಥದ್ದು ಮಾಯೆ. ಹಣದ ಹಿಂದೆ ಹೊರಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಅನೇಕರನ್ನು ಕಾಣಬಹುದು. ಅಥವಾ, ಹಣ ಮನುಷ್ಯನ ಕೈಯಲ್ಲಿ ಏನೆಲ್ಲ ಮಾಡಿಸುತ್ತದೆ ಎನ್ನುವುದಕ್ಕು ಹಲವು ಉದಾಹರಣೆಗಳಿವೆ. ‘ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು..’ ಎಂದು ಸಾಗುವ ಗೀತೆಯ ಸಾಲುಗಳೇ ಇದಕ್ಕೆ ಉತ್ತಮ ಉದಾಹರಣೆ. ಹಣದ ವಿಷಯವಾಗಿ ಇಕ್ಕಟ್ಟಿಗೆ ಸಿಲುಕಿಕೊಂಡಾಗ ಪುರುಷರು ನಿಭಾಯಿಸುವ ರೀತಿ ಅಥವಾ ಆತನಿಗೆ ಎದುರಾಗುವ ಕಷ್ಟಗಳು ಬೇರೆ. ಆದರೆ, ಅದೇ ಒಂದು ಹೆಣ್ಣು ಇಂತಹ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಆಕೆ ಎದುರಿಸಬೇಕಾದ ಕಷ್ಟ ಬೇರೆಯದೇ ತಿರುವು ಪಡೆದುಕೊಳ್ಳಬಹುದು. ಅಂತಹದೊಂದು ಕಥೆಯನ್ನು ಇಟ್ಟುಕೊಂಡು ತೆರೆಯ ಮೇಲೆ ತೋರಿಸಿರುವ ಚಿತ್ರ ‘ಶೀಲ’. ಬಾಲು ನಾರಾಯಣ್ ನಿರ್ದೇಶದ, ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿರುವ ಚಿತ್ರವಿದು.

    ಇದನ್ನೂ ಓದಿ: ಈ ವಾರದಲ್ಲಿ ನಾಲ್ವರು ಸ್ಟಾರ್​ ನಟರ ಸಿನಿಮಾಗಳು ರಿಲೀಸ್​!; ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ

    ಇದರಲ್ಲಿ ಹಣ ಎನ್ನುವುದು ನೆಪ ಮಾತ್ರ. ಇದರಿಂದ ಹೆಣ್ಣಿನ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರ ಹಾಗೂ ಆಕೆ ಅದರಿಂದ ಹೇಗೆ ಕಷ್ಟ ಅನುಭವಿಸುತ್ತಾಳೆ ಎನ್ನುವುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಇಂತಹ ಕಥಾಹಂದರದ ಸಿನಿಮಾ ಈಗಾಗಲೇ ಹಲವು ಸಿನಿಮಾಗಳನ್ನು ನೋಡಿರಬಹುದು. ಆದರೆ, ಇದು ಆಗಾಗ ಸುದ್ದಿಯಾಗುವ ಅತ್ಯಾಚಾರ ಪ್ರಕರಣಗಳಿಂದ ಇದು ಇಂದಿಗೂ ಪ್ರಸ್ತುತ ಎನ್ನುವುದನ್ನು ನಿರೂಪಿಸುವ ಪ್ರಯತ್ನ ಚಿತ್ರತಂಡ ಮಾಡಿದೆ. ಇಡೀ ಚಿತ್ರದ ಮುಖ್ಯ ಭಾಗ ನಡೆಯುವುದು ಒಂದು ರೆಸಾರ್ಟ್ ಹಾಗೂ ಇರುಳಿನಲ್ಲಿ. ಆ ರೆಸಾರ್ಟ್‌ನಲ್ಲಿ ನಿಜಕ್ಕೂ ನಡೆದದ್ದು ಏನು? ಎನ್ನುವ ನಿಗೂಢ ಹುಡುಕಾಟ ಕಥೆಯ ಆತ್ಮ. ಬಾಲು ನಾರಾಯಣ್ ಮಲಯಾಳಂ ನಿರ್ದೇಶಕ ಆದ ಕಾರಣಕ್ಕೆ ಇರಬಹುದು ಈ ಚಿತ್ರದಲ್ಲೂ ಮಾಲಿವುಡ್ ಸಿನಿಮಾಗಳ ಛಾಯೆ ಕಾಣಬಹುದು. ಒಂದೇ ಘಟನೆಯನ್ನು ಎರಡು ದೃಷ್ಟಿಕೋನದಲ್ಲಿ ಹೇಳಿ, ಟ್ವಿಸ್ಟ್ ನೀಡಿದ್ದಾರೆ.

    ಶೋಷಣೆಗೆ ಒಳಗಾದ ಹೆಣ್ಣಿನ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೆ ಅಗತ್ಯವಿರುವ ಸಂಕಟ, ತೊಳಲಾಟ, ತೀವ್ರವಾದ ನಟನೆಯ ಮೂಲಕ ತೆರೆಯ ಮೇಲೆ ತೋರಿಸುವ ಪ್ರಯತ್ನವನ್ನೂ ಕಾಣಬಹುದು. ಖಡಕ್ ಲುಕ್‌ನಲ್ಲಿ ರಿಯಾಜ್ ಖಾನ್, ಅವಿನಾಶ್ ಹಾಗೂ ಸುನೀಲ್ ಸುಗದ ನಟನೆ ಸಹಜವಾಗಿದೆ. ತಾಂತ್ರಿಕವಾಗಿ ಹೇಳುವುದಾದರೆ ಕೆಲವೆಡೆ ಲಿಪ್ ಸಿಂಕ್ ಹಾಗೂ ಧ್ವನಿ ಇನ್ನೂ ಸರಿಯಾಗಿ ಸಿಂಕ್ ಆಗಬಹುದಿತ್ತು ಹಾಗೂ ಕತ್ತಲಿನ ಅಂಶ ಕಡಿಮಯಾಗುವ ಅವಕಾಶವಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts