More

    ಕವಿ, ಜಾನಪದ ಗಾಯಕ ‘ಗದ್ದರ್’ ಇನ್ನಿಲ್ಲ!

    ತೆಲಂಗಾಣ: ‘ಗದ್ದರ್’ ಎಂದೇ ಖ್ಯಾತರಾಗಿದ್ದ ಜಾನಪದ ಗಾಯಕ, ಕವಿ ಗುಮ್ಮಡಿ ವಿಠ್ಠಲ್ ರಾವ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಗದ್ದರ್​ ಅವರು ತೀವ್ರ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಇಂದು ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.

    ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳಲ್ಲಿ ಸ್ಕ್ರೀನ್​ಡೋರ್​; ರೈಲು ಹತ್ತುವಾಗ, ಇಳಿಯುವಾಗ ಸುರಕ್ಷತೆ ಗ್ಯಾರಂಟಿ

    1948 ರಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್ ರಾವ್ ಅವರು, 2010 ರವರೆಗೆ ನಕ್ಸಲೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ನಂತರ ಅವರು ತೆಲಂಗಾಣ ಚಳವಳಿಗೆ ಸೇರ್ಪಡೆಗೊಂಡರು. ತೆಲಂಗಾಣದಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಹಕ್ಕುಗಳಿಗಾಗಿ ಗದ್ದರ್ ಹೋರಾಟ ಮಾಡಿದ್ದರು. ತಮ್ಮ ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದು, ಹೆಚ್ಚಿನ ಜನಮನ್ನಣೆ ಗಳಿಸಿದ್ದರು.

    2011 ರಲ್ಲಿ ‘ಜೈ ಬೋಲೋ ತೆಲಂಗಾಣ’ ಚಿತ್ರದಲ್ಲಿ ಹಾಡಿದ್ದ ಗದ್ದರ್ ಅವರು ನಂದಿ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಸಾವಿಗೆ ಅಸಂಖ್ಯಾ ಅಭಿಮಾನಿಗಳು ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಭಾರೀ ಮಳೆಗೆ ಉತ್ತರಾಖಂಡದಲ್ಲಿ 31 ಸಾವು!; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts