More

  ಯುಪಿಎಸ್​ಸಿ ಟಾಪರ್​ಗೆ ಕೊಹ್ಲಿಯೇ ಸ್ಫೂರ್ತಿ! ವಿರಾಟ್ ಅವರ ಯಾವ ಗುಣ ಅನನ್ಯಾಗೆ ಇಷ್ಟವಾಯಿತು?

  ಹೈದರಾಬಾದ್​: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೇ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣ ಎಂದು ಪರಿಗಣಿಸಲಾದ ಯುಪಿಎಸ್​ಸಿ ಪರೀಕ್ಷಾ ಫಲಿತಾಂಶ ಮೊನ್ನೆಯಷ್ಟೇ (ಏಪ್ರಿಲ್​ 16) ಹೊರಬಿದ್ದಿದೆ. ತೆಲಂಗಾಣದ ಮಹೆಬೂಬ್‌ನಗರ ಜಿಲ್ಲೆಯ ಅನನ್ಯಾ ರೆಡ್ಡಿ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಸಿವಿಲ್ಸ್‌ನಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಹೀಗಾಗಿ ಅನನ್ಯಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

  ಮಧ್ಯಮ ವರ್ಗದ ಹಿನ್ನೆಲೆಯ ಹುಡುಗಿಯೊಬ್ಬಳು ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಕನಸನ್ನು ನನಸಾಗಿಸಿಕೊಂಡಿರುವುದು ಹಮ್ಮೆಯ ಸಂಗತಿ. ತನ್ನ ಈ ಸಾಧನೆಗೆ ಸ್ಫೂರ್ತಿ ಯಾರು ಎಂಬುದನ್ನು ಅನನ್ಯಾ ತಿಳಿಸಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೇ ತನಗೆ ಸ್ಫೂರ್ತಿ ಎಂದಿದ್ದಾರೆ.

  ಪದವಿ ಓದುವಾಗ ಯುಪಿಎಸ್​ಸಿಗೆ ವಿಶೇಷ ಗಮನ ನೀಡಿದೆ. ದಿನಕ್ಕೆ 12 ರಿಂದ 14 ಗಂಟೆ ಅಧ್ಯಯನ ಮಾಡುತ್ತಿದ್ದೆ. ಹೈದರಾಬಾದ್‌ನಲ್ಲಿ ಸಿವಿಲ್ಸ್ ಕೋಚಿಂಗ್ ತೆಗೆದುಕೊಂಡಿದ್ದೆ. ಆದರೆ, ಮೂರನೇ ರ್ಯಾಂಕ್ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅನನ್ಯಾ ರೆಡ್ಡಿ ಹೇಳಿದರು.

  ನಾನು ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ತುಂಬಾ ಇಷ್ಟಪಡುತ್ತೇನೆ. ಅವರೇ ನನ್ನ ಸ್ಫೂರ್ತಿ. ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಅವರ ಛಲ ಬಿಡದ ನಡೆ, ಸೋಲನ್ನು ಒಪ್ಪಿಕೊಳ್ಳದ ಧೋರಣೆ ಮತ್ತು ಶಿಸ್ತನ್ನು ಅವರಿಂದ ಕಲಿತೆ. ಫಲಿತಾಂಶ ಏನೇ ಬಂದರೂ ನಮ್ಮ ಕೈಲಾದಷ್ಟು ನಾವು ಪ್ರಯತ್ನಿಸಬೇಕೆಂಬುದನ್ನು ಕೊಹ್ಲಿ ಅವರನ್ನು ನೋಡಿ ಕಲಿತೆ ಎಂದು ಅನನ್ಯಾ ರೆಡ್ಡಿ ಹೇಳಿದ್ದಾರೆ.

  ಇದೇ ಸಂದರ್ಭದಲ್ಲಿ ಯುಪಿಎಸ್​ಸಿ ತಯಾರಿ ಕುರಿತು ಮಾತನಾಡಿದ ಅನನ್ಯಾ, ನಾನು ಹಗಲಿರುಳು ಶ್ರಮಿಸಿದ್ದೇನೆ. ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡೆ. ಬಾಲ್ಯದಿಂದಲೂ ಸಮಾಜಸೇವೆ ಮಾಡಬೇಕು ಎಂಬ ಆಸೆ ಇತ್ತು ಎಂದರು. ತಂದೆ ಸ್ವಯಂ ಉದ್ಯೋಗಿ ಮತ್ತು ತಾಯಿ ಗೃಹಿಣಿ ಎಂದು ಅನನ್ಯಾ ತಿಳಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಸಿವಿಲ್ ಸಾಧನೆ ಮಾಡಿದ ಮೊದಲ ವ್ಯಕ್ತಿ ನಾನೇ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  See also  Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಹಾರ್ಡ್​ವರ್ಕ್​ ಎನ್ನುತ್ತಾ ರಾತ್ರಿಯಿಡೀ ಓದಬೇಡಿ!

  ಮಹೆಬೂಬ್‌ನಗರ ಜಿಲ್ಲೆಯ ಪೊನ್ನಕಲ್, ಅನನ್ಯಾ ರೆಡ್ಡಿ ಅವರ ಹುಟ್ಟೂರು. ಒಟ್ಟಾರೆ ಅನನ್ಯಾ ಸಾಧನೆಗೆ ಕೊಹ್ಲಿಯೇ ಸ್ಫೂರ್ತಿ. ಕೊಹ್ಲಿ ಕ್ರಿಕೆಟಿಗನಾಗಿ ಬೆಳೆದ ರೀತಿಯು ಅನೇಕರಿಗೆ ಸ್ಪೂರ್ತಿಯಾಗಿದೆ. ಹೀಗಾಗಿ ಕೊಹ್ಲಿ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನನ್ಯಾ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

  ಖ್ಯಾತ ಯೂಟ್ಯೂಬರ್ ಆ್ಯಂಗ್ರಿ ರಾಂಟ್​ಮ್ಯಾನ್ ಸಾವಿಗೆ ಅಸಲಿ ಕಾರಣ ಬಹಿರಂಗ!

  ಇದನ್ನೇನಾದ್ರೂ ಸಾರಾ ನೋಡಿದ್ರೆ ಅಷ್ಟೇ ಕತೆ! ಸುಂದರಿಯನ್ನು ಕಂಡು ಗಿಲ್​ ಏನು ಮಾಡಿದ್ರೂ ನೋಡಿ….

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts