More

  ಖ್ಯಾತ ಯೂಟ್ಯೂಬರ್ ಆ್ಯಂಗ್ರಿ ರಾಂಟ್​ಮ್ಯಾನ್ ಸಾವಿಗೆ ಅಸಲಿ ಕಾರಣ ಬಹಿರಂಗ!

  ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ಸಿನಿಮಾ ವಿಮರ್ಶೆ ಮಾಡುವ ಮೂಲಕ ಜನಪ್ರಿಯ ಯೂಟ್ಯೂಬರ್ ಎಂದು ಗುರುತಿಸಿಕೊಂಡಿದ್ದ ಅಭ್ರದೀಪ್ ಸಹಾ (ಆ್ಯಂಗ್ರಿ ರಾಂಟ್‌ಮ್ಯಾನ್) ನಿನ್ನೆ (ಏಪ್ರಿಲ್​ 18) ಅತಿ ಕಿರಿಯ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಹಾಗೆ ಕೇವಲ 27 ವರ್ಷ ವಯಸ್ಸಾಗಿತ್ತಷ್ಟೇ. ಇಷ್ಟು ಕಿರಿಯ ವಯಸ್ಸಿಗೆ ಸಾಯುವಂಥದ್ದು ಸಹಾಗೆ ಏನಾಗಿತ್ತು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಲ್ಲಿ ಕೇಳಿಬರುತ್ತಿತ್ತು. ಇದೀಗ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  ಕಳೆದ ಕೆಲ ದಿನಗಳ ಹಿಂದೆ ನಿಯಾನ್​ ಮ್ಯಾನ್ ಶಾರ್ಟ್ಸ್​​ ಎಂಬುವವರು ಶೀಘ್ರದಲ್ಲೇ ಅಭ್ರದೀಪ್ ಸಹಾ ಓಪನ್​ ಹಾರ್ಟ್​ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು. ಬಳಿಕ ಏಪ್ರಿಲ್​ 15ರಂದು ನಿಯಾನ್,​ ಅಭ್ರದೀಪ್​ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಮಾಹಿತಿ ನೀಡಿದ್ದರು.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್​ ಎಂಬುವವರು ಟ್ವೀಟ್​ ಮಾಡಿ, ಭಾರವಾದ ಹೃದಯದಿಂದ ಆಭ್ರದೀಪ್​ (ಆ್ಯಂಗ್ರಿ ರಾಂಟ್‌ಮ್ಯಾನ್) ನಿನ್ನೆ (ಏಪ್ರಿಲ್ 16) ರಾತ್ರಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ಪ್ರತಿಯೊಬ್ಬರ ಮುಖದಲ್ಲೂ ಅವರು ನಗು ತರಿಸುತ್ತಿದ್ದ ರೀತಿ ಇನ್ನು ಮುಂದೆ ನೆನಪಾಗಿ ಉಳಿಯುತ್ತದೆ ಎಂದು ಬರೆದುಕೊಳ್ಳುವ ಸಾವಿನ ಸುದ್ದಿ ತಿಳಿಸಿದರು.

  ಅಭ್ರದೀಪ್​ ಸಾವಿನ ಕುರಿತಂತೆ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಏಪ್ರಿಲ್​ 16ರಂದು ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಆ್ಯಂಗ್ರಿ ರಾಂಟ್​ಮ್ಯಾನ್​ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

  ಏನಾಗಿತ್ತು ರಾಂಟ್​ಮ್ಯಾನ್​ಗೆ?
  ಸಹಾ ಅವರು ಕೆಲ ತಿಂಗಳ ಹಿಂದೆ ಬೆಂಗಳೂರಿನ ನಾರಾಯಣ ಕಾರ್ಡಿಯಾಕ್​ ಆಸ್ಪತ್ರೆಗೆ ದಾಖಲಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಕಾರಣದಿಂದಲೇ ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ತಿಂಗಳುಗಟ್ಟಲೆ ನಿಷ್ಕ್ರಿಯರಾಗಿದ್ದರು. ಅವರು ಮರಳಿ ಬರುತ್ತಾರೆ ಎಂದು ಅವರ ತಂದೆ ಹೇಳಿದ್ದರು. ಆದರೆ, ಒಂದು ವಾರದ ಹಿಂದೆ ಸಹಾ ಮತ್ತೆ ತೀವ್ರ ಅನಾರೋಗ್ಯಕ್ಕೆ ಒಳಗಾದರು ಮತ್ತು ತೀವ್ರ ನಿಗಾ ಘಟಕದಲ್ಲಿ ಅವರನ್ನು ಇರಿಸಲಾಯಿತು. ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೆ ಸಹಾ 27ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಂಟ್​ಮ್ಯಾನ್​ ಸಾವಿಗೆ ಅಂಗಾಂಗ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ.

  ಯಾರು ಈ ಆ್ಯಂಗ್ರಿ ರಾಂಟ್​ಮ್ಯಾನ್​?
  ಯೂಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ, ಕ್ರೀಡೆ ಕುರಿತಾಗಿ ರಿವ್ಯೂ ಕೊಡುವ ಮೂಲಕ ಫೇಮಸ್​ ಆಗಿರುವ ಅಭ್ರದೀಪ್​ (ಆ್ಯಂಗ್ರಿ ರಾಂಟ್​ಮ್ಯಾನ್​) ವಿಮರ್ಶೆ ಮಾಡುತ್ತಿದ್ದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದವು. ಅವರ ಯೂಟ್ಯೂಬ್​ ಚಾನೆಲ್​ನಲ್ಲಿ 4.81 ಲಕ್ಷ ಚಂದಾದಾರರನ್ನು ಹೊಂದಿದ್ದರು.

  ಅತ್ತೆ ಜತೆ ಅಳಿಯನ ಲಿಪ್​ಲಾಕ್​! ಕೊನೆಗೂ ಮೌನ ಮುರಿದ ಬಿಗಿಲ್​ ಪಾಂಡಿಯಮ್ಮಳ ಪತಿ

  ಗಂಡ-ಹೆಂಡ್ತಿ ಮಧ್ಯೆ ಅದು ಇರಬಾರದು… ದಾಂಪತ್ಯ ಜೀವನ ಬೋರ್​ ಅನ್ಸುತ್ತೆ ಎಂದ ನಟಿ ಸ್ನೇಹಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts