More

    ಗಂಡ-ಹೆಂಡ್ತಿ ಮಧ್ಯೆ ಅದು ಇರಬಾರದು… ದಾಂಪತ್ಯ ಜೀವನ ಬೋರ್​ ಅನ್ಸುತ್ತೆ ಎಂದ ನಟಿ ಸ್ನೇಹಾ!

    ಚೆನ್ನೈ: ನಟಿ ಸ್ನೇಹಾ ಅವರು ಒಂದು ಕಾಲದಲ್ಲಿ ಯುವಕರ ಪಾಲಿನ ಕನಸಿನ ಹುಡುಗಿಯಾಗಿದ್ದರು. ಸ್ಟಾರ್​ ನಟ ಜತೆಯಲ್ಲಿ ನಟಿಸಿರುವ ಸ್ನೇಹಾ, ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಕನ್ನಡದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ರವಿಶಾಸ್ತ್ರಿ, ಪ್ರಕಾಶ್​ ರಾಜ್​ ನಟನೆಯ ಒಗ್ಗರಣೆ ಹಾಗೂ ದರ್ಶನ್​ ಅಭಿನಯದ ಕುರುಕ್ಷೇತ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ತಮ್ಮ ಸೌಂದರ್ಯದಿಂದಲೇ ಸ್ನೇಹಾ ಕನ್ನಡಿಗರ ಹೃದಯ ಗೆದ್ದಿದ್ದಾರೆ.

    ಸ್ನೇಹಾ ಅವರು ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂನಲ್ಲೂ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 2000 ದಿಂದ 2010ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ನಗುವಿನ ರಾಣಿ ಎಂದೇ ಖ್ಯಾತಿ ಗಳಿಸಿದ್ದರು. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಟ ಪ್ರಸನ್ನ ಅವರ ಪ್ರೀತಿಯ ಬಲೆಯಲ್ಲಿ ಬಿದ್ದು 2012ರಲ್ಲಿ ಮದುವೆಯಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    ಸದ್ಯ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿರುವ ಸ್ನೇಹಾ ಹೊಸ ಸೀರೆ ವ್ಯಾಪಾರ ಶುರು ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಪತಿ-ಪತ್ನಿಯ ನಡುವಿನ ಸಂಬಂಧದ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಸಂಬಂಧದಲ್ಲಿ ಪೊಸೆಸಿವ್​ನೆಸ್ ಇರಬೇಕು ಆದರೆ ಅತಿಯಾಗಬಾರದು. ಅತಿಯಾದರೆ ನಾವು ನಂಬಿಕೆ ಕಳೆದುಕೊಳ್ಳುತ್ತೇವೆ. ಯಾಕೆ ಹೊರಗೆ ಹೋಗುತ್ತಿದ್ದೀರಿ? ಇಷ್ಟೊತ್ತು ಏನ್​ ಮಾಡ್ತಿದ್ರಿ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಲೇಬಾರದು. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡರೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲ. ದಂಪತಿ ಮಧ್ಯೆ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕು ಎಂದು ಸ್ನೇಹಾ ಹೇಳಿದ್ದಾರೆ.

    ಇನ್ನೊಬ್ಬರು ನಮ್ಮನ್ನು ಕೇಳುವ ಮೊದಲು ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಯಾವ ಸಮಯಕ್ಕೆ ಮನೆಗೆ ವಾಪಸ್​ ಬರುತ್ತೇವೆ ಎಂಬುದನ್ನು ಮುಂಚಿತವಾಗಿಯೇ ಹೇಳಬೇಕು. ನೀವು ಹೊರಗೆ ಹೋದ ನಂತರ ನಿಮಗೆ ಸಮಯವಿದ್ದರೆ, ನಿಮ್ಮ ಸಂಗಾತಿಗೆ ಒಮ್ಮೆ ಕರೆ ಮಾಡಿ ವಿಚಾರಿಸಬೇಕು. ಅವನು ಅಥವಾ ಅವಳು ತಿಂದಿದ್ದಾನೋ/ತಿಂದಿದ್ದಾಳೋ ಎಂದು ಕೇಳಬೇಕು ಎಂದು ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ.

    ಇದರ ನಡುವೆ ಪತಿ ಪ್ರಸನ್ನ ಬಗ್ಗೆ ಮಾತನಾಡಿರುವ ಸ್ನೇಹಾ, ನಾವಿಬ್ಬರು ಲವ್​ ಮಾಡಿ ಮದುವೆಯಾದೆವು. ಮದುವೆ ಬಳಿಕವೂ ನಾವಿಬ್ಬರು ಪ್ರತ್ಯೇಕವಾಗಿ ವಾಸುತ್ತಿದ್ದೆವು. ಏಕೆಂದರೆ, ನಮಗೆ ನಮ್ಮದೇಯಾದ ಪ್ರೈವೆಸಿ ಬೇಕಿತ್ತು. ಆರಂಭದಲ್ಲಿ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದೆ. ಮದುವೆಯಾದ 15 ರಿಂದ 20 ದಿನಗಳವರೆಗೂ ಹೀಗೆ ಇದ್ದೆವು. ಆನಂತರ ನಾವಿಬ್ಬರು ಮತ್ತೆ ಒಂದಾದೆವು. ಸುಂದರ ಸಂಸಾರ ನಡೆಸಿದೆವು. ಎಲ್ಲರ ಕುಟುಂಬದಲ್ಲೂ ಇದ್ದಂತೆ ನಮ್ಮಲ್ಲೂ ಸಣ್ಣ ಪುಟ್ಟ ಜಗಳಗಳು ನಡೆದಿವೆ. ಮಕ್ಕಳಾದ ಬಳಿಕ ನಮ್ಮ ಗಮನವೆಲ್ಲ ಅವರ ಕಡೆ ಹೋಯಿತು. ಮಕ್ಕಳನ್ನು ಚೆನ್ನಾಗಿ ಬೆಳಸಬೇಕು ಎಂಬುದೇ ನಮಗಿರುವ ಏಕೈಕ ಚಿಂತೆಯಾಗಿದೆ. ನಮ್ಮ ವೈವಾಹಿಕ ಜೀವನ ಒಮ್ಮೊಮ್ಮೆ ಬೋರ್​ ಆಗುತ್ತದೆ. ಅಂತಹ ಸಮಯದಲ್ಲಿ ನಾವು ಡೇಟ್ ನೈಟ್‌ಗಳಿಗೆ ಹೋಗುತ್ತೇವೆ. ಆ ಸಮಯದಲ್ಲಿ ನಾವು ಅನೇಕ ನೆನಪುಗಳ ಬಗ್ಗೆ ಮಾತನಾಡುತ್ತೇವೆ. ಆಗ ನಮ್ಮ ನಡುವೆ ಮತ್ತೆ ಹೊಸ ಉತ್ಸಾಹ ಬರುತ್ತದೆ ಎಂದು ಸ್ನೇಹ ಹೇಳಿದರು.

    ಪ್ರಸನ್ನ ಮತ್ತು ನಾನು ಆಗಾಗ ಬೆಕ್ಕು ಮತ್ತು ಇಲಿಯಂತೆ ಜಗಳವಾಡುತ್ತೇವೆ. ಆದರೆ ಜಗಳದ ನಂತರವೂ ನಾವು ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ಸ್ನೇಹಾ ಹೇಳಿದರು.

    ಸಿನಿಮಾ ವಿಚಾರಕ್ಕೆ ಬರುವುದಾದರೆ ಸ್ನೇಹಾ ಅವರು ಸದ್ಯ ನಟ ವಿಜಯ್​ ಅಭಿನಯದ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸ್ಟಾರ್​ ಡೈರೆಕ್ಟರ್​ ವೆಂಕಟ್​ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಅತ್ತೆ ಜತೆ ಅಳಿಯನ ಲಿಪ್​ಲಾಕ್​! ಕೊನೆಗೂ ಮೌನ ಮುರಿದ ಬಿಗಿಲ್​ ಪಾಂಡಿಯಮ್ಮಳ ಪತಿ

    ದಾಂಪತ್ಯದಲ್ಲಿ ಸಿಗುವ ಖುಷಿ ನನಗೆ ಮದುವೆ ಆಗದೇನೆ ಸಿಕ್ಕಿದೆ: ನಟಿ ಸುಷ್ಮಾ ವೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts