More

    ಪ್ರೀತಿ ಇದ್ದಾಗ ಮದುವೆ ಯಾಕೆ ಆಗಬೇಕು ?: ನಟಿ ಸುಷ್ಮಾ ವೀರ್

    ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ, ನಿರ್ಮಾಪಕಿಯಾಗಿ ಗುರತಿಸಿಕೊಂಡಿದ್ದ ಸುಷ್ಮಾ ವೀರ್​​ ಅವರು ಇತ್ತೀಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ತನ್ನ ಜೀವನದ ಕೆಲವು ಕಹಿ ಘಟನೆ, ಹಾಗೂ ತಾವು ತೆಗೆದುಕೊಂಡ ನಿರ್ಧಾರಗಳಿಂದ ಆಗಿರುವ ಸಮಸ್ಯೆಗಳನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

    ಸುಷ್ಮಾ ವೀರ್ ಕನ್ನಡದ ನಿರ್ದೇಶಕಿ, ನಟಿ , ಉಲ್ಟಾ ಪಲ್ಟಾ (1997), ದಶಮುಖ (2012), ಡೆಡ್ಲಿ-2 (2010) ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ಸುಷ್ಮಾ ವೀರ್‌. ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನಂತ್ರ ಚಿತ್ರರಂಗದಿಂದ ದೂರವಾಗಿದ್ದರು. ನಂತರ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರರು. ಆದರೆ ಬಿಗ್​ಬಾಸ್​​ ಮನೆಯಿಂದ ಹೊರ ಬರ್ತಿದ್ದಂತೆ ಮತ್ತೆ ಎಲ್ಲೂ ಕಾಣಿಸಿಕೊಳ್ಳಲೆ. ಆದರೆ ಇದೀಗ ನಟಿ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

    ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸುಷ್ಮಾ ವೀರ್, ಅಮ್ಮ ಅಷ್ಟು ಕಷ್ಟ ಪಟ್ಟು ಸಾಕಿದ್ದಾರೆ. ಆದರೆ ಯಾವುದೇ ಒಂದು ಹೊಡೆತದಿಂದ ನಾನು ಕುಗ್ಗಿ ಹೋಗುವುದಿಲ್ಲ. ಪ್ರೀತಿ ಎಂದರೆ ಮದುವೆ ಯಾಕೆ ಬೇಕು?  ನಾವು ಸೆಕ್ಯೂರ್​ ಆಗಿರಬೇಕು ಎಂದು ಮದುವೆ ಆಗಬೇಕಾ? ಹೊಂದಾಣಿಕೆ ಎನ್ನುವುದು ಸ್ನೇಹಿತರ ಮಧ್ಯ ಕೂಡಾ ಇರಬಹುದು. ಮದುವೆ ಆಗಬೇಕು ಎನ್ನುವುದೆ ಬೇಕಿಲ್ಲ.  ಪ್ರೀತಿ ಎಂದರೆ ನನ್ನನ್ನು ನಾನು ಪ್ರೀತಿಸುವುದೂ ಕೂಡಾ ಆಗಿರುತ್ತದೆ. ನನಗೆ ಏನು ಕೊರತೆ ಆಗಿದೆ.  ಒಬ್ಬರಿಗೆ ಮದುವೆ ಆಗಿ ದಾಂಪತ್ಯದಲ್ಲಿ ಏನು ಖುಷಿ ಸಿಕ್ಕಿದ್ಯೋ ಅದಕ್ಕಿಂತ ಹೆಚ್ಚಿನದ್ದನ್ನು ಭಗವಂತ ನನಗೆ ಕೊಟ್ಟಿದ್ದಾನೆ.  ಗೌರವಿಸಿರುವ ಬಳಗ, ತಾಯಂದಿರುವ, ಜನರ ಪ್ರೀತಿ, ಜನರ ದಂಡು, 50 ಕೋಟಿ ಹೃದಯ ನನಗೆ ಸಿಕ್ಕಿದೆ ಇದಕ್ಕಿಂತ  ಇನ್ನೇನು ಬೇಕು. ನಾನು ಪದವಿಗೆ ಹೋರಾಟ ಮಾಡುವುದಿಲ್ಲ ರಾಜಕೀಯದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಸ್ಥಾನ ಬೇಡಾ ಜನರಿಗೆ ಸಹಾಯ ಮಾಡಿ ಕೊಡುವಂತೆ ಆಗಬೇಕು ಎನ್ನುವುದಾಗಿದೆ ಎಂದಿದ್ದಾರೆ.

    ‘ಬಿಗ್ ಬಾಸ್ ರಿಯಾಲಿಟಿ ಶೊನಲ್ಲಿ ಕಾಣಿಸಿಕೊಂಡಾಗ ಅನೇಕರು ಸರ್‌ಪ್ರೈಸ್ ಆಗಿಬಿಟ್ಟರು. ಅಮ್ಮ ಎರಡು ವಾರ ಅಲ್ವಾ ಹೋಗಿ ಬಾ ಎಂದರು. ಒಪ್ಪಿಕೊಂಡು ಹೋಗಿದ್ದೆ ಅಲ್ಲಿ ಎರಡು ವಾರ ಎಂದವರು ಐದು ವಾರ ಮಾಡಿಬಿಟ್ಟರು. Bigg boss is not scripted, Bigg Boss is well edited. ವಿಡಿಯೋವನ್ನು ಎಡಿಟ್ ಮಾಡುವಾಗ ಎಡಿಟರ್‌ಗೆ ತಲೆ ಇರಬೇಕು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ತುಂಬಾ ಸಮಸ್ಯೆ ಆಗುತ್ತಿತ್ತು. ನಾನು ಟ್ರಿಗರ್ ಆಗಿರುವುದನ್ನು ಹಾಕುತ್ತಿದ್ದರು, ವಿಷಯ ಹಾಕುತ್ತಿರಲಿಲ್ಲ. ಒಂದು ಘಟನೆಯ ಹಿನ್ನೆಲೆ ಮತ್ತು ಮುನ್ನಲೆ ಹೇಳುತ್ತಿರಲಿಲ್ಲ. ಸೆಲೆಕ್ಟಿವ್ ಸ್ಮಾರ್ಟ್‌ನೆಸ್‌ ಅನ್ನೋದು ಎಡಿಟಿಂಗ್‌ನಲ್ಲಿ ಮಾಡುತ್ತಿದ್ದರು ಅದು ತುಂಬಾ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

    ನನಗೆ ಮೆಡಿಕೇಷನ್‌ ಕೊಡುವುದು ನಿಲ್ಲಿಸಿಬಿಟ್ಟಿದ್ದರು. ನನಗೆ 23 ಸರ್ಜರಿ ಆಗಿತ್ತು ಎಂದು ಅಲ್ಲಿದ್ದವರಿಗೂ ಗೊತ್ತಿತ್ತು ಆದರೂ ಔಷದಿ ಕೊಡಲಿಲ್ಲ. ಏಸಿಯಲ್ಲಿ ಇರುವಂತೆ ಇರಲಿಲ್ಲ ನೀರಿನಲ್ಲಿ ಇಳಿಯುವಂತೆ ಇರಲಿಲ್ಲ. ಹೊರ ಬಂದ ಮೇಲೆ 6 ಸರ್ಜರಿ ಆಯ್ತು. ಬಿಗ್ ಬಾಸ್‌ ಮನೆಯಲ್ಲಿದ್ದ ಇನ್ನಿತ್ತರ ಸ್ಪರ್ಧಿಗಳು ನನ್ನ ಪರ ಔಷಧಿಗಳನ್ನು ಕೇಳುತ್ತಿದ್ದರು. ನನಗೆ ಆಗಲೇ ಬೆನ್ನು ಆಪರೇಷನ್ ಆಗಿತ್ತು ಆದರೂ ನನ್ನ ಶ್ರಮ ಹಾಕಿ ಕೆಲಸ ಮಾಡಿದ್ದೀವಿ. ನಾನು ಹೋಗುವ ಮೊದಲು ಅನ್ನ ಆರೋಗ್ಯದ ಬಗ್ಗೆ ಹೇಳಿದ್ದೇನು. ಅಷ್ಟೆಲ್ಲಾ ಆರೋಗ್ಯ ಸಮಸ್ಯೆ ಇದ್ದರೂ ಔಷದಿ ಕೇಳಿದ್ದರೂ ಕೊಡುತ್ತಿರಲಿಲ್ಲ. ಬಿಗ್ ಬಾಸ್‌ ಹೊರ ಬಂದ ಮೇಲೆ ನನಗೆ ರಕ್ತ ಕೌಂಟ್​​ 5.2 ಆಗಿಬಿಟ್ಟಿತ್ತು. ನಂತ್ರ ಚಿಕಿತ್ಸೆ ಪಡೆದು ಕೊಂಡೆನು. ನಾನು ಹೇಗೆ ಇದ್ದೇನು ಎಂದು ಯಾರು ನೋಡಲು ಬರಲಿಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts