More

    ಇದನ್ನೇನಾದ್ರೂ ಸಾರಾ ನೋಡಿದ್ರೆ ಅಷ್ಟೇ ಕತೆ! ಸುಂದರಿಯನ್ನು ಕಂಡು ಗಿಲ್​ ಏನು ಮಾಡಿದ್ರೂ ನೋಡಿ….

    ನವದೆಹಲಿ: ಪ್ರಸಕ್ತ ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳಿಂದ ಧೂಳೆಬ್ಬಿಸುತ್ತಿದ್ದಾರೆ. ಇದನ್ನು ನೋಡಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಚಪ್ಪಾಳೆ ಹಾಗೂ ಶಿಳ್ಳೆಗಳೊಂದಿಗೆ ಕಿರುಚುತ್ತಾ ಸಂಭ್ರಮಿಸುತ್ತಾರೆ. ಇದರ ನಡುವೆ ಕ್ಯಾಮರಾಮನ್​ಗಳು ಸುಂದರ ಹುಡುಗಿಯರನ್ನು ಸೆರೆಹಿಡಿಯುವ ಮೂಲಕ ತಮ್ಮ ಕೈಚಳಕವನ್ನು ತೋರಿಸುತ್ತಲೇ ಇರುತ್ತಾರೆ. ಪಂದ್ಯವನ್ನು ಸೆರೆಹಿಡಿಯುವುದರ ಜತೆಗೆ ಒಂದು ಕಡೆ ಮುದ್ದು ಮುಗದ ಚೆಲುವೆಯರನ್ನು ದೊಡ್ಡ ಪರದೆಯ ಮೇಲೆ ತೋರಿಸುವ ಮೂಲಕ ಆಟಕ್ಕೆ ಮತ್ತಷ್ಟು ರಂಗು ಚೆಲ್ಲುತ್ತಾರೆ. ಹೀಗೆ ಕ್ಯಾಮೆರಾಮ್ಯಾನ್​ಗಳು ಸೆರೆಹಿಡಿಯುವ ಯುವತಿಯರು ಒಮ್ಮೊಮ್ಮೆ ಭಾರಿ ವೈರಲ್​ ಆಗುತ್ತಾರೆ. ಆದರೆ, ಈ ಬಾರಿ ವೈರಲ್​ ಆಗಿರುವ ವಿಡಿಯೋ ವಿಶೇಷ ಕಾರಣದಿಂದ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.

    ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟಿಂಗ್​ನಲ್ಲಿ ಮಿಂಚುತ್ತಿರುವ ಗಿಲ್, ನಾಯಕನಾಗಿ ಕೊಂಚ ಒತ್ತಡ ಎದುರಿಸುತ್ತಿದ್ದಾರೆ. ಈ ಸೀಸನ್​ನ ಆರಂಭದಲ್ಲಿ ಉತ್ತಮ ಗೆಲುವು ಸಾಧಿಸಿರುವ ಗುಜರಾತ್ ಇದೀಗ ತನ್ನ ಫಾರ್ಮ್ ಕಳೆದುಕೊಳ್ಳುತ್ತಾ ಬರುತ್ತಿದೆ. ಸೋಲುಗಳಿಂದ ತಂಡ ದುರ್ಬಲಗೊಳ್ಳುತ್ತಿದೆ. ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್​ 17.3 ಓವರ್​ಗಳಲ್ಲಿ ಕೇವಲ 89 ರನ್ ಗಳಿಸಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್​ 8.5 ಓವರ್ಗಳಲ್ಲೇ ಗುರಿ ಮುಟ್ಟುವ ಮೂಲಕ 6 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಗುಜರಾತ್​ ಬ್ಯಾಟ್ಸ್​ಮನ್​​ಗಳು ಸಂಪೂರ್ಣ ವಿಫಲವಾದರು. ಹೀಗಾಗಿ ಗುಜರಾತ್​ಗೆ ಸೋಲಾಯಿತು.

    ಸದ್ಯ ಇದೆಲ್ಲವನ್ನು ಬದಿಗಿಡಿ. ಈ ಪಂದ್ಯವು ಕುತೂಹಲಕಾರಿ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಕ್ಯಾಮರಾಮನ್ ತನ್ನ ಲೆನ್ಸ್ ಅನ್ನು ಸುಂದರ ಹುಡುಗಿಯ ಮೇಲೆ ಕೇಂದ್ರೀಕರಿಸಿದನು. ಈ ವೇಳೆ ಯುವತಿಯು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವುದು ದೊಡ್ಡ ಪರದೆಯ ಮೇಲೆ ಗೋಚರವಾಯಿತು. ಆ ಹುಡುಗಿಯನ್ನು ನೋಡಿ ಶುಭಮನ್ ಗಿಲ್ ಕೊಟ್ಟ ಪ್ರತಿಕ್ರಿಯೆ ವೈರಲ್​ ಆಗಿದೆ.

    ಅಬ್ಬಾ ಎಷ್ಟು ಚೆನ್ನಾಗಿದ್ದಾಳೆ ಅಂತಾ ಗಿಲ್​ ಮನಸ್ಸಿನಲ್ಲೇ ಹೇಳಿಕೊಂಡಂತಿತ್ತು ಅವರ ಮುಖಭಾವ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ನೆಟ್ಟಿಗರು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕ್ಯಾಮೆರಾಮನ್‌ನ ಕಾರ್ಯವನ್ನು ಶ್ಲಾಘಿಸುತ್ತಲೇ ಕೆಲವರು ಗಿಲ್ ಕಾಲೆಳೆದಿದ್ದಾರೆ. ಈ ವಿಡಿಯೋವನ್ನು ಸಾರಾ ನೋಡಿದ್ರೆ ಬೇಜಾರು ಮಾಡಿಕೊಳ್ಳುವುದು ಖಚಿತ ಎನ್ನುತ್ತಿದ್ದಾರೆ. ನೀನು ಸಾಮಾನ್ಯ ಅಲ್ಲ ಗಿಲ್ ಬ್ರೋ ಎಂದು ಇತರರು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಗಂಡ-ಹೆಂಡ್ತಿ ಮಧ್ಯೆ ಅದು ಇರಬಾರದು… ದಾಂಪತ್ಯ ಜೀವನ ಬೋರ್​ ಅನ್ಸುತ್ತೆ ಎಂದ ನಟಿ ಸ್ನೇಹಾ!

    VIDEO: ನನ್ನ ಶಕ್ತಿಯ ಮೂಲ S*X! ಬಿರುಸಿನ ಪ್ರಚಾರದ ವೇಳೆ ಮಹುವಾ ಮೊಯಿತ್ರಾ ಓಪನ್​ ಟಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts