More

    ಭಾರೀ ಮಳೆಗೆ ಉತ್ತರಾಖಂಡದಲ್ಲಿ 31 ಸಾವು!; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

    ಉತ್ತರಾಖಂಡ: ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಉಂಟಾಗಿ, ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಮಳೆಯ ಅವಾಂತರಕ್ಕೆ ಇಲ್ಲಿಯವರೆಗೂ 31 ಜನರು ಮೃತಪಟ್ಟಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.

    ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಬೀಗ ತಯಾರಿಸಿದ ವೃದ್ಧ ದಂಪತಿ: ತೂಕ, ಗಾತ್ರ ನೋಡಿ ಎಲ್ಲರೂ ಶಾಕ್​..!

    ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಿಗೆ ಇಂದು ಭಾರತ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ಗಳನ್ನು ನೀಡಿದ್ದು, ರಾಜ್ಯವು ನಿರಂತರ ಮಳೆ ಮತ್ತು ಭೂಕುಸಿತದಿಂದ ತತ್ತರಿಸಿದೆ. ಸುನಿಲ್ ಮತ್ತು ಸಿಂಘದಾರ್ ಪ್ರದೇಶಗಳು ಭೂಕುಸಿತಕ್ಕೆ ಸಿಲುಕಿದ ನಂತರ ಜೋಶಿಮಠದಲ್ಲಿಯೂ ಕೂಡ ಭೂ ಕುಸಿತ ಉಂಟಾಗಿದೆ.

    ಇಂದು (ಆಗಸ್ಟ್​ 06) ಮುಂಜಾನೆ ಗ್ರಾಮದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ವೃದ್ಧರೊಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಚಂಬಾ ಪೊಲೀಸ್ ಠಾಣೆ ಎಸ್‌ಎಚ್‌ಒ ಎಲ್. ಎಸ್. ಬುಟೋಲಾ ಅವರು, ಧನೌಲ್ತಿ ತಹಸಿಲ್‌ನ ಮರೋಡಾ ಗ್ರಾಮದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪವೀನ್ ದಾಸ್ ಅವರ ಮಕ್ಕಳಾದ ಸ್ನೇಹಾ (12) ಮತ್ತು ರಣವೀರ್ (10) ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ,(ಏಜೆನ್ಸೀಸ್)

    ಈ ವಾರದಲ್ಲಿ ನಾಲ್ವರು ಸ್ಟಾರ್​ ನಟರ ಸಿನಿಮಾಗಳು ರಿಲೀಸ್​!; ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts