ಜತೆಗೆ, ತಮ್ಮ ಪೋಸ್ಟರ್ಗೆ ಕ್ಯಾಪ್ಷನ್ ಕೊಟ್ಟಿರುವ ನಟ ಮಮ್ಮುಟ್ಟಿ ಅವರು, “ನಾನು ಇಲ್ಲಿ ಸಂಚಾರಿ ವಿಜಯ್ ಅವರ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ವಿಜಯ್ ಇನ್ನಿಲ್ಲ ಎಂದು ನಾನು ನಂಬಲು ಇಂದಿಗೂ ಸಾಧ್ಯವಾಗುತ್ತಿಲ್ಲ. ನಾವು ಹೈದರಾಬಾದ್ನಲ್ಲಿ ನಡೆದ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದೆವು. ಮತ್ತು ಅವರು ನನ್ನ ಅಭಿಮಾನಿ ಎಂದು ಅವರು ಹೇಳಿದಾಗ ನಾನು ನಿಜವಾಗಿಯೂ ವಿನಮ್ರನಾಗಿದ್ದೆ. ನಾನು ಅವರ ಮುಂದಿನ ಚಿತ್ರವನ್ನು ನೋಡಬೇಕು ಮತ್ತು ನನ್ನ ಆಲೋಚನೆಗಳನ್ನು ಕೇಳಬೇಕೆಂದು ಅವರು ಬಯಸಿದ್ದರು. ಅದು ವಿಜಯ್ ಅವರು ನನ್ನೊಂದಿಗೆ ಆಡಿದ ಕೊನೆಯ ಮಾತು. ಇನ್ನು, ಅದೇ ಮಾತು ಕೊನೆಯದು ಆಗುತ್ತೆ ಅಂತ ಯಾರಿಗೆ ತಾನೆ ಗೊತ್ತಿತ್ತು. ಇನ್ನು, ಅವರ ಹೊಸ ಚಿತ್ರ "ತಲೆದಂಡ" ವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಅವರ ಸ್ಮರಣೆಯನ್ನು ಆಚರಿಸೋಣ'', ಎಂದು ಬರೆದುಕೊಂಡಿದ್ದಾರೆ.