More

    ನಾಲ್ಕನೇ ತರಗತಿ ಮಕ್ಕಳಿಗೆ ಡಾ.ಪುನೀತ್ ರಾಜ್​ಕುಮಾರ್ ಬಗ್ಗೆ ಪ್ರಶ್ನೆ! ಫೋಟೋ ವೈರಲ್

    ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಅವರದ್ದು ಎಲ್ಲರಿಗೂ ಒಂದು ಮಾದರಿಯಾಗುವಂತಹ ವ್ಯಕ್ತಿತ್ವ. ಒಂದು ಸಿನಿಮಾ ನಟನಾಗಿ ಮಾತ್ರವಲ್ಲದೇ ಅವರ ಸಾಮಾಜಿಕ ಸೇವೆಯ ಕೆಲಸದಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಗೆದ್ದಿದ್ದರು. ತಾವು ‘ಕನ್ನಡದ ಕೋಟ್ಯಧಿಪತಿ’ ಶೋಗೆ ನಿರೂಪಣೆ ಮಾಡಿದಕ್ಕೆ ಸಿಕ್ಕ ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಸಹ ಬಡ ಹೆಣ್ಣು ಮಕ್ಕಳ ಶಾಲೆಯ ನಿರ್ಮಾಣಕ್ಕಾಗಿ ಮೀಸಲಿಟ್ಟ ಮಹಾನುಭಾವ. ಇನ್ನು, ಆ ಶಾಲೆಯಲ್ಲಿ ಯಾವುದೇ ತಾರತಮ್ಯ ಇಲ್ಲದೇ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬುದು ಅವರ ಆಸೆಯಾಗಿತ್ತು.
    ಅಪ್ಪು ಅವರ ಆ ಕನಿಸು ನನಸಾಗಿ ಮೈಸೂರಿನ ಶಕ್ತಿಧಾಮದಲ್ಲಿ ಇಂದು ಶಾಲೆಯ ಕಟ್ಟಡ ನಿರ್ಮಾಣ ಆಗಿದೆ. ಶೀಘ್ರದಲ್ಲೇ ಅಲ್ಲಿ ಹಲವು ಕಾರ್ಯಾರಂಭ ಮಾಡಲಿದ್ದಾರೆ. ಹಾಗಾಗಿ, ಅಪ್ಪು ಅವರ ಬಗ್ಗೆ ಎಲ್ಲಾ ಮಕ್ಕಳು ತಿಳಿದುಕೊಳ್ಳಲೇ ಬೇಕು ಅನಿಸುತ್ತೆ. ಮೊದಲೇ ಅಪ್ಪು ಅವರಿಗೆ ಎ್ಲಲಾ ವಯಸ್ಸಿನ ಅಭಿಮನಿಗಳು ಇದ್ದರು. ಇನ್ನು, ಅವರ ಈ ಸಾಮಾಜಿಕ ಸೇವೆಯಿಂದ ಸದ್ಯ ಕರುನಾಡ ಪ್ರತಿಯೊಂದು ಮನೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹೀಗಿದ್ದರೂ, ಹಲವು ಶಾಲೆಗಳು ಅಪ್ಪು ಅವರನ್ನು ಮಕ್ಕಳು ನೆನಪಿಟ್ಟುಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
    ಇದಕ್ಕೆ ಒಂದು ಬೆಸ್ಟ್ ಉದಾಹರಣೆ ಎಂದರೆ ಅದು ಬೆಂಗಳೂರಿನ ಒಂದು ಖಾಸಗಿ ಶಾಲೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ. ಹೌದು, ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಸಲಾಗಿದ್ದು, ಅದರ ಪ್ರಶ್ನೆ ಪತ್ರಿಕೆಯಲ್ಲಿ ‘ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ, ಪ್ರಶ್ನೆಗಳಿಗೆ ಉತ್ತರಿಸಿ’ ಎಂಬ ವಿಭಾಗದಲ್ಲಿ ಡಾ.ಪುನೀತ್ ರಾಜ್​ಕುಮಾರ್ ಅವರ ಕಿರು ಪರಿಚಯ ಮತ್ತು ಸಾಧನೆ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ಓದಿಕೊಂಡು, ಮುಂದಿನ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕು ಎಂದು ತಿಳಿಸಿಲಾಗಿದೆ. 
    ಸದ್ಯ, ಖಾಸಗಿ ಶಾಲೆಯ ನಾಲ್ಕನೇ ತರಗತಿಯ ಮಕ್ಕಳ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಎಲ್ಲರೂ ಹಂಚಿಕೊಳ್ಳಲು ಆರಂಭಿಸಿದ್ದಾರೆ. ಈ ಪ್ರಶ್ನೆ ಪತ್ರಿಕೆ ಕಂಡ ಹಲವರು ಶಾಲೆಯ ಪಠ್ಯದಲ್ಲಿ ಪುನೀತ್ ರಾಜ್​ಕುಮಾರ್ ಅವರ ಸಾಧನೆ ಮತ್ತು ಜನಪರ ಕಾರ್ಯಗಳ ಬಗ್ಗೆ ಪಾಠ ಅಳವಡಿಸಬೇಕು ಎಂಬ ಅಭಿಪ್ರಾಯ ಕೂಡಾ ಹಲವು ಅಭಿಮಾನಿಗಳಿಂದ ಹಾಗೂ ಮಕ್ಕಳ ಪೋಷಕರಿಂದ ಸಹ ಕೇಳಿಬರುತ್ತಿದೆ. 

    ನಾಲ್ಕನೇ ತರಗತಿ ಮಕ್ಕಳಿಗೆ ಡಾ.ಪುನೀತ್ ರಾಜ್​ಕುಮಾರ್ ಬಗ್ಗೆ ಪ್ರಶ್ನೆ! ಫೋಟೋ ವೈರಲ್

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts