More

  ಬುದ್ಧ ಪೂರ್ಣಿಮೆ ಕಾರ್ಯಕ್ರಮ ನಾಳೆ

  ಬೇಲೂರು: ತಾಲೂಕಿನ ಬಿಕ್ಕೋಡು ಸಮೀಪದ ಮಧಘಟ್ಟ ಗಾಂಧಾರ ಬುದ್ಧ ವಿಹಾರದಲ್ಲಿ ಮೇ 23ರಂದು 2568ನೇ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಜು ಮನವಿಮಾಡಿದ್ದಾರೆ.

  ವೈಶಾಕ ಪೌರ್ಣಿಮೆಯ ಬುದ್ಧ ಜಯಂತಿ ಅಂಗವಾಗಿ ಮಧಘಟ್ಟ ಗಾಂಧಾರ ಬುದ್ಧ ವಿಹಾರಕ್ಕೆ ಇತ್ತೀಚೆಗೆ ಆಗಮಿಸಿದ್ದ ಬೆಂಗಳೂರಿನ ಮಹಾ ಬೋದಿ ಸೊಸೈಟಿಯ ಬಿಕ್ಕು ಸಂಘದವರನ್ನು ಸ್ವಾಗತಿಸಿ ಮಾತನಾಡಿದ ಅವರು, ಬುದ್ಧ ಜಯಂತಿಯಂದು ಮೇ 23ರ ಬೆಳಗ್ಗೆ 9ಗಂಟೆಗೆ ಬೇಲೂರು ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ, ಬೈಕ್ ಜಾಥಾಕ್ಕೆ ಚಾಲನೆ ನೀಡುವ ಮೂಲಕ ಭಗವಾನ್ ಬುದ್ಧರ ಕರುಣೆ ಪ್ರೀತಿ ಮೈತ್ರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

  ವಿಹಾರದ ಅಧ್ಯಕ್ಷ ಭಂತೆ ಬೋದಿದತ್ತ ಮಹಾ ಥೇರಾರವರ ದಿವ್ಯ ಸಾನ್ನಿಧ್ಯದಲ್ಲಿ ವಿಹಾರದಲ್ಲಿ ಬುದ್ಧ ಪೂಜೆ, ದೀಪ ಬೆಳಗಿಸುವುದು, ತ್ರಿರತ್ನ ಪೂಜಾ, ಪರಿತ್ತ ಪಠಣೆ, ತಿಸರಣ ಮತ್ತು ಪಂಚಶೀಲ ಬೋಧನೆ ಹಾಗೂ ಧಮ್ಮ ಪ್ರವಚನ ನೆಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಿಹಾರದ ಗೌರವ ಕಾರ್ಯದರ್ಶಿ ಸಿದ್ಧಯ್ಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಬುದ್ಧ ಪೂಜೆ ಹಾಗೂ 7 ಗಂಟೆಗೆ ಬೆಳಕಿನ ದೀಪೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

  ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಗಂಗಾಧರ್, ಕುಮಾರ್ ಮಾಳೇಗೆರೆ, ಮಂಜು ಮೊಗಸಾವರ, ವಿರೂಪಾಕ್ಷ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts